Connect with us

    KARNATAKA

    ಗಣೇಶ ವಿಗ್ರಹವನ್ನು ಪೊಲೀಸ್ ವಾಹನಕ್ಕೆ ತುಂಬಿದ ಪೊಲೀಸರು – ಗಣೇಶನನ್ನು ಬಂಧಿಸುವ ಕೆಳಮಟ್ಟಕ್ಕೆ ಕಾಂಗ್ರೆಸ್‌ ಇಳಿದಿದೆ – ಪ್ರಧಾನಿ ಮೋದಿ ವಾಗ್ದಾಳಿ

    ಬೆಂಗಳೂರು ಸೆಪ್ಟೆಂಬರ್ 14: ಪ್ರತಿಭಟನೆಗೆ ತಂದಿದ್ದ ಗಣೇಶ ವಿಗ್ರಹವನ್ನು ಪೊಲೀಸರು ವಶಕ್ಕೆ ಪಡೆದು ಅದನ್ನು ತಮ್ಮ ವಾಹನಕ್ಕೆ ತುಂಬಿಸಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪೊಲೀಸರ ಈ ನಡೆ ಇದೀಗ ಭಾರೀ ವಿವಾದಕ್ಕೆ ಕಾರಣವಾಗಿದೆ. ಈ ಘಟನೆ ಕುರಿತಂತೆ ಪ್ರಧಾನಿ ಮೋದಿಯವರು ಕಾಂಗ್ರೇಸ್ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.


    ಮಂಡ್ಯದಲ್ಲಿ ಗಣೇಶ ಉತ್ಸವದ ವೇಳೆ ನಡೆದ ಕೋಮುಗಲಭೆಯಲ್ಲಿ ಕಲ್ಲು ತೂರಾಟಗಾರ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಮತ್ತು ಘರ್ಷಣೆಯ ನಂತರ ಬಂಧಿತರಾಗಿರುವ ಹಿಂದೂ ಸದಸ್ಯರನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿ ಬೆಂಗಳೂರು ಮಹಾನಗರ ಗಣೇಶ ಉತ್ಸವ ಸಮಿತಿ ವತಿಯಿಂದ ಬೆಂಗಳೂರಿನ ಟೌನ್​ಹಾಲ್ ಎದುರು ಪ್ರತಿಭಟನೆ ನಡೆಸಲಾಯಿತು.

    ಪ್ರತಿಭಟನಾಕಾರರು ಗಣಪತಿ ವಿಗ್ರಹವನ್ನು ಹಿಡಿದುಕೊಂಡೇ ಪ್ರತಿಭಟನೆ ಮಾಡಿದರು. ಈ ವೇಳೆ ಪೊಲೀಸರು ಪ್ರತಿಭಟನಾಕಾರರನ್ನು ಪೊಲೀಸ್​ ಬಸ್​ಗೆ ಹತ್ತಿಸಿ, ಅವರ ಕೈಯಲ್ಲಿದ್ದ ಗಣೇಶ ವಿಗ್ರಹವನ್ನು ಹೊತ್ತುಕೊಂಡು ಪೊಲೀಸ್ ಜೀಪ್​ನೊಳಗೆ ಇಟ್ಟುಕೊಂಡಿದ್ದಾರೆ. ಇದರ ವಿಡಿಯೋ, ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಪೊಲೀಸರು ಗಣೇಶನ ಮೂರ್ತಿಯನ್ನು ಪೊಲೀಸ್ ವಾಹನದಲ್ಲಿರಿಸುವ ಮೂಲಕ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಆದರೆ, ಪ್ರತಿಭಟನಾಕಾರರಿಂದ ವಶಪಡಿಸಿಕೊಂಡು ಪೊಲೀಸ್​ ಜೀಪ್​ನಲ್ಲಿ ಸುರಕ್ಷಿತವಾಗಿರಿಸಲಾಗಿದ್ದ ಗಣೇಶನ ವಿಗ್ರಹವನ್ನು ಪೊಲೀಸರೇ ವಿಸರ್ಜನೆ ಮಾಡಿದ್ದಾರೆ ಎನ್ನಲಾಗಿದೆ.

     

    ಇನ್ನು ಈ ಘಟನೆ ಖಂಡಿಸಿ ಪ್ರಧಾನಿ ಮೋದಿ ಕಾಂಗ್ರೇಸ್ ವಿರುದ್ದ ಕಿಡಿಕಾರಿದ್ದು, ಕರ್ನಾಟಕದಲ್ಲಿ ಕಾಂಗ್ರೆಸ್‌ ಒಂದು ವರ್ಗದ ತುಷ್ಟೀಕರಣ ಮಾಡುತ್ತಿದೆ. ಕಾಂಗ್ರೆಸ್ ತುಷ್ಟೀಕರಣಕ್ಕಾಗಿ ಕೆಳಮಟ್ಟಕ್ಕೆ ಇಳಿಯಬಹುದು. ಇಂದು ಕರ್ನಾಟಕದಲ್ಲಿ ದೇವರು ಗಣಪತಿಯನ್ನೂ ಕಾಂಗ್ರೆಸ್ ಸರ್ಕಾರ ಕಂಬಿ ಹಿಂದೆ ಹಾಕಿದೆ ಎಂದು ಟೀಕಿಸಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply