DAKSHINA KANNADA
ಉಪ್ಪಿನಂಗಡಿಯ ಪೆರಿಯಡ್ಕದ ಆಟೋ ಚಾಲಕನಿಗೆ ಮೈಸೂರಿನಿಂದ ಹೆಲ್ಮೆಟ್ ಹಾಕಿಲ್ಲ ಎಂದು ಟ್ರಾಫಿಕ್ ಪೊಲೀಸ್ ಫೈನ್
ಪುತ್ತೂರು ಸೆಪ್ಟೆಂಬರ್ 14: ಮೈಸೂರನಲ್ಲಿ ಹೆಲ್ಮೆಟ್ ಧರಿಸದೆ ವಾಹನ ಚಾಲನೆ ಮಾಡಿದ್ದೀರೆಂದು ರಿಕ್ಷಾ ಚಾಲಕನಿಗೆ ದಂಡ ಪಾವತಿಸುವಂತೆ ಮೆಸೇಜ್ ಬಂದಿದೆ.
ಕೆಎ.21B 3862 ನಂಬರಿನ ಅಟೋ ಚಾಲಕ ರೋಹಿತ್ ನಂಬರಿಗೆ ಕರ್ನಾಟಕ ಪೊಲೀಸ್ ಇಲಾಖೆಯ ಇ ಚಲನ್ ನಿಂದ ಮೆಸೇಜ್ ಬಂದಿದೆ. 500 ರೂಪಾಯಿ ದಂಡ ಪಾವತಿಸುವಂತೆ ತಿಳಿಸಲಾಗಿದೆ.
ಉಪ್ಪಿನಂಗಡಿಯ ಪೆರಿಯಡ್ಕದ ಆಟೋ ಚಾಲಕರಾಗಿರು ರೋಹಿತ್ ಮೊಬೈಲ್ ಗೆ ಈ ಮೇಸೆಜ್ ಬಂದಿದ್ದು. ಮೆಸೇಜ್ ಓದಿ ದಂಗಾಗಿದ್ದಾರೆ. ರೋಹಿತ್ ಹತ್ರ ಆಟೋ ಬಿಟ್ಟರೆ ಬೇರೆ ದ್ವಿಚಕ್ರ ವಾಹನವಿಲ್ಲ, ಅಲ್ಲದೆ ಮೈಸೂರು ಜಿಲ್ಕೆಯ ತಲಕಾಡು ಜಂಕ್ಷನ್ ನಲ್ಲಿ ಹೆಲ್ಮೆಟ್ ಹಾಕದೆ ವಾಹನ ಚಲಾಯಿಸಿದ್ದೀರಿ ಎನ್ನುವ ಮೆಸೇಜ್ ಬೇರೆ ಬಂದಿದೆ. ಎಐ ಕ್ಯಾಮರಾದ ಎಡವಟ್ಟೋ, ಹಣ ಪೀಕಿಸುವ ಹೊಸ ದಂಧೆಯೋ ಎನ್ನುವ ಅನುಮಾನ ಈ ಮೆಸೇಜ್ ಮೂಡಿಸಿದೆ.
You must be logged in to post a comment Login