Connect with us

    KARNATAKA

    ವಿಜಯಪುರ ಸಿಂದಗಿ ಪೊಲೀಸರ ಭರ್ಜರಿ ಬೇಟೆ, ನಾಲ್ವರು ಬೈಕ್ ಕಳ್ಳರು 37 ಬೈಕ್ ವಶ..!

    ವಿಜಯಪುರ: ವಿಜಯಪುರ ಜಿಲ್ಲೆಯ ಸಿಂದಗಿ ಪೊಲೀಸರು ಭರ್ಜರಿ ಭೇಟೆಯಾಡಿದ್ದು ನಾಲ್ಕು ಜನ ಬೈಕ್ ಕಳ್ಳರನ್ನು ಬಂಧಿಸಿ 37 ಬೈಕ್ ವಶಕ್ಕೆ ಪಡೆದಿದ್ದುಇವುಗಳ ಒಟ್ಟು ಮೌಲ್ಯ ರೂ. 16.65 ಲಕ್ಷ ಎಂದು ಅಂದಾಜಿಸಲಾಗಿದೆ.

     

    ಸಿಂದಗಿ ನಗರ ಮತು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬೈಕ್ ಕಳ್ಳತನ ಪ್ರಕರಣಗಳು ಹೆಚ್ಚಾದ ಹಿನ್ನೆಲೆಯಲ್ಲಿ ವಿಜಯಪುರ ಎಸ್ಪಿ ಋಷಿಕೇಶ ಸೋನಾವಣೆ ಅವರ ಮಾರ್ಗದರ್ಶನದಲ್ಲಿ ಸಿಪಿಐ ನಾನಾಗೌಡ ಆರ್. ಪೊಲೀಸ್ ಪಾಟೀಲ ಹಾಗೂ ಸಿಂದಗಿ ಪಿಎಸ್ಐ ಭೀಮಪ್ಪ ಎಂ. ರಬಕವಿ ಅವರು ವಿಶೇಷ ಕಾರ್ಯಾಚರಣೆ ನಡೆಸಿದ್ದರು. ಫೆ. 8 ರಂದು ಸಂಜೆ 4 ಗಂಟೆ ಸುಮಾರಿಗೆ ಸಿಂದಗಿ ಪಟ್ಟಣದ ಯಂಕಂಚಿ ಬೈಪಾಸ್ ರಸ್ತೆಯಲ್ಲಿ ನಂಬರ್ ಪ್ಲೇಟ್ ಇಲ್ಲದೆ ಸಂಚರಿಸುತ್ತಿದ್ದ ಎರಡು ಮೊಟರ್ ಸೈಕಲ್ ತಡೆದು ಆ ಬೈಕುಗಳಲ್ಲಿ ಬಂದ ನಾಲ್ಕು ಜನ ಆರೋಪಿಗಳನ್ನು ವಿಚಾರಿಸಿದಾಗ ತಾವು ಯಾದಗಿರಿ ಜಿಲ್ಲೆಯ ಶಹಾಪೂರ ಮತ್ತು ಸುರಪುರದವರಾದ ಬಸವರಾಜ ಭೀಮಣ್ಣ ಹುಣಸಿಗಿಡದ(31), ಹುಲುಗಪ್ಪ ಮರೆಪ್ಪ ಕೂಕಲೋರ(22), ಕೊಂಡಯ್ಯ ಭೀಮರಾಯ ಪಾರ್ವತಿದೊಡ್ಡಿ(22), ರವಿಕುಮಾರ ದೇವಿಂದ್ರಪ್ಪ ಪಾರ್ವತಿದೊಡ್ಡಿ ಎಂದು ತಿಳಿಸಿದ್ದಾರೆ. ಅಲ್ಲದೇ, ತಾವು ಒಟ್ಟಾಗಿ ಕಲಬುರಗಿ, ಯಾದಗಿರಿ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಬೈಕ್ ಕಳ್ಳತನ ಮಾಡಿದ್ದಾಗಿ ಮಾಹಿತಿ ನೀಡಿದ್ದಾರೆ. ರಾಜನಕೊಳ್ಳೂರ, ಸಿಂದಗಿ, ಯಡ್ರಾಮಿ, ಸೇಡಂ, ಭೀಮರಾಯನಗುಡಿ, ಬಿರೂರ, ಚಾಮನಾಳ, ಬೂದೂನೂರ, ಹದನೂರ, ನೆಲೋಗಿ, ಜೇವರ್ಗಿ, ಮೂದಬಾಳ, ಮಲ್ಲಾ(ಬಿ), ಮಳ್ಳಿ, ಅರಕೇರಾ, ಸಲದಾಪೂರ, ಜಾಲಹಳ್ಳಿ, ಕೊಡೇಕಲ್, ಶಿರಾಳ, ನೇಲ್ಲೋಗಿ, ತಾಳಿಕೋಟೆ ಮುಂತಾದ ಪಟ್ಟಣಗಳು ಮತ್ತು ಗ್ರಾಮಗಳಿಗೆ ತೆರಳಿದಾಗ ಜಮೀನಿನ ದಂಡೆಯಲ್ಲಿ ಹಾಗೂ ಇತರ ಜಾಗಗಳಲ್ಲಿ ನಿಲ್ಲಿಸಿದ ಬೈಕುಗಳ ಹ್ಯಾಂಡ್ ಲಾಕ್ ಮುರಿದು ಮೋಟರ್ ಸೈಕಲ್ ಗಳನ್ನು ಕಳ್ಳತನ ಮಾಡಿರುವುದಾಗಿ ಬಾಯಿ ಬಿಟ್ಟಿದ್ದಾರೆ. ನಂತರ ಕೂಲಕಂಷ ವಿಚಾರಣೆ ನಡೆಸಿದ ಸಿಂದಗಿ ಪೊಲೀಸರು ಒಟ್ಟು ರೂ. 16.65 ಲಕ್ಷ ಅಂದಾಜು ಮೌಲ್ಯದ 37 ಬೈಕುಗಳನ್ನು ವಶಪಡಿಸಿಕೊಂಡಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply