LATEST NEWS
ಹಣ ಇಲ್ಲ ಎಂದು ರೈಲಿನ ಬೋಗಿಯ ಚಕ್ರದ ಬಳಿ ಕುಳಿತು 250 ಕಿಲೋ ಮೀಟರ್ ಪ್ರಯಾಣ – ಆತಂಕಕಾರಿಯಾದ ಘಟನೆ
ಜಬಲ್‌ಪುರ ಡಿಸೆಂಬರ್ 27: ರೈಲಿನ ಬೋಗಿಯ ಚಕ್ರದ ಕೆಳಗೆ ಕುಳಿತು ವ್ಯಕ್ತಿಯೊಬ್ಬ ಬರೋಬ್ಬರಿ 250 ಕಿಲೋ ಮೀಟರ್ ದೂರ ಪ್ರಯಾಣಿಸಿದ ಆತಂಕಕಾರಿ ಘಟನೆ ನಡೆದಿದೆ.
ಇಟಾರ್ಸಿಯಿಂದ ಜಬಲ್ ಪುರಕ್ಕೆ ವ್ಯಕ್ತಿ ದಾನ ಪುರ್ ಎಕ್ಸ್ ಪ್ರೇಸ್ ರೈಲಿನ ಬೋಗಿಯೊಂದರ ಚಕ್ರದ ಬಳಿ ಕುಳಿತು ಪ್ರಯಾಣಿಸಿದ್ದಾರೆ. ರೈಲ್ವೆ ನಿಲ್ದಾಣದಲ್ಲಿ ಬೋಗಿಗಳ ನಿಯಮಿತ ಪರೀಕ್ಷೆ ವೇಳೆ ವ್ಯಕ್ತಿಯೊಬ್ಬ ರೈಲಿನ ಕೆಳಗೆ ಇರುವುದು ಪತ್ತೆಯಾಗಿದೆ. ಕೂಡಲೇ ಸಿಬ್ಬಂದಿ ರೈಲನ್ನು ನಿಲ್ಲಿಸಲು ಲೋಕೋಪೈಲೆಟ್ ಗೆ ಸೂಚನೆ ನೀಡಿದ್ದಾರೆ. ಬಳಿಕ ಪರಿಶೀಲನೆ ನಡೆಸಿದಾಗ ವ್ಯಕ್ತಿಯೊಬ್ಬ ರೈಲಿನ ಕೆಳಗೆ ಇರುವದು ಕಂಡು ಬಂದಿದೆ.
ಬಳಿಕ ಯುವಕನನ್ನು ಹೊರಗೆ ಬರುವಂತೆ ರೈಲ್ವೆ ಅಧಿಕಾರಿಗಳು ತಿಳಿಸಿದ್ದು, ಹೊರ ಬಂದ ಯುವಕನ ವಿಚಾರಣೆ ನಡೆಸಿದಾಗ , ಹಣ ಇಲ್ಲದ ಕಾರಣ ರೈಲಿನ ಚಕ್ರದ ಕೆಳಗೆ ಕುಳಿತಿದ್ದಾಗಿ ತಿಳಿಸಿದ್ದಾರೆ.
ಆರ್ ಪಿಎಫ್ ಅಧಿಕಾರಿಗಳು ಯುವಕನ ನಡವಳಿಕೆ ನೋಡಿದಾಗ ಮಾನಸಿಕ ಸ್ಥಿತಿ ಸರಿಯಿಲ್ಲ ಎಂದು ತಿಳಿದು ಬಂದಿದೆ. ಬಳಿಕ ಯುವಕನ್ನು ಬಿಟ್ಟು ಕಳುಹಿಸಿದ್ದಾರೆ. ಈ ನಡುವೆ ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊ ವೈರಲ್ ಆದ ನಂತರ, ವ್ಯಕ್ತಿಯ ಗುರುತು ಮತ್ತು ವಾಸಸ್ಥಳ ಸೇರಿದಂತೆ ಹೆಚ್ಚಿನ ಮಾಹಿತಿಯನ್ನು ಸಂಗ್ರಹಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
A man travelled 250 km from Itarsi to #Jabalpur by hiding between the wheels of an express train without a ticket, due to lack of money
Know morehttps://t.co/OvfcO3qyN1#MadhyaPradesh #Train #ViralVideo pic.twitter.com/tLxUAgLdhu
— The Times Of India (@timesofindia) December 27, 2024