LATEST NEWS
ವಡೋದರ – ಸ್ಕೂಟರ್ ನಲ್ಲಿ ಮೊಸಳೆಗೆ ಅರಣ್ಯ ಇಲಾಖೆಗೆ ಡ್ರಾಪ್ ಕೊಟ್ಟ ಯುವಕರು – ವಿಡಿಯೋ ವೈರಲ್
ವಡೋದರ ಸೆಪ್ಟೆಂಬರ್ 02: ಗುಜರಾತ್‌ನಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗಿದ್ದು, ಇದರಿಂದಾಗಿ ಇದೀಗ ಮೊಸಳೆಗಳು ಜನವಸತಿ ಪ್ರದೇಶಗಳಿಗೆ ಬಂದು ಆಶ್ರಯಪಡೆದಿದೆ.
ವಡೋದರದಲ್ಲಿ ಮಳೆಯಿಂದಾಗಿ ಉಂಟಾದ ಪ್ರವಾಹ ಪರಿಸ್ಥಿತಿಗೆ ಸುಮಾರು 40ಕ್ಕೂ ಅಧಿಕ ಮೊಸಳೆಗಳು ಜನವಸತಿ ಪ್ರದೇಶಕ್ಕೆ ಬಂದಿದ್ದು, ಅವುಗಳನ್ನು ರಕ್ಷಣೆ ಮಾಡಲಾಗಿದೆ. ಇನ್ನು ಇಬ್ಬರು ಯುವಕರು ಮೊಸಳೆಯೊಂದನ್ನು ರಕ್ಷಣೆ ಮಾಡಿ ಅದನ್ನು ಅರಣ್ಯ ಇಲಾಖೆಗೆ ತೆಗೆದುಕೊಂಡು ಹೋಗುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ, ಒಬ್ಬ ವ್ಯಕ್ತಿ ಸ್ಕೂಟರ್ ಸವಾರಿ ಮಾಡುತ್ತಿದ್ದರೆ, ಹಿಂಬದಿ ಸವಾರ ಮೊಸಳೆಯನ್ನು ಅಡ್ಡಲಾಗಿ ಹಿಡಿದು ಕುಳಿತಿದ್ದಾನೆ. !!
#crocodile
ಮೊಸಳೆಯನ್ನು ಸ್ಕೂಟರ್ ನಲ್ಲಿ ಡ್ರಾಪ್ ಮಾಡಿದ ಯುವಕರು pic.twitter.com/Qgu9maOnvW— themangaloremirror (@themangaloremir) September 2, 2024