DAKSHINA KANNADA
ಇನ್ಮುಂದೆ ಪೊಲೀಸ್ ಇಲಾಖೆಯ ಆಂತರಿಕ ವಿಚಾರಣೆ ಇಲಾಖಾಧಿಕಾರಿಗಳು ಮಾಡುವಂತಿಲ್ಲ..!
ಬೆಂಗಳೂರು: ಸದಾ ಕಾನೂನು ಸುವ್ಯವಸ್ಥೆ ಕಾಪಾಡುವ ಶಿಸ್ತಿನ ಇಲಾಖೆಯಾದ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಮಾಡುವಂತಿಲ್ಲ. ಇದಕ್ಕಾಗಿ ನಿವೃತ್ತ ನ್ಯಾಯಾಧೀಶರ ಸೇವೆ ಪಡೆದುಕೊಳ್ಳಲು ರಾಜ್ಯ ಗೃಹ ಇಲಾಖೆ ಮುಂದಾಗಿದೆ.
ಪೊಲೀಸ್ ಇಲಾಖೆಯಲ್ಲಿ ಯಾವುದೇ ಅಕ್ರಮಗಳು, ಕರ್ತವ್ಯ ಲೋಪ, ಭ್ರಷ್ಟಾಚಾರ, ಮೇಲಧಿಕಾರಿಗಳಿಂದ ಕಿರುಕುಳ ಇತ್ಯಾದಿ ಇಲಾಖಾ ವಿಚಾರಣೆಯ ವ್ಯಾಪ್ತಿಗೊಳಪಡುವ ಪ್ರಕರಣಗಳ ವಿಚಾರಣೆಯ ಜವಾಬ್ದಾರಿ ನಿವೃತ್ತ ನ್ಯಾಯಾಧೀಶರ ಹೆಗಲಿಗೆ ಬೀಳಲಿದೆ. ಈ ಮೂಲಕ ಪೊಲೀಸ್ ಮೇಲಧಿಕಾರಿಗಳಿಗಿದ್ದ ಇಲಾಖಾ ವಿಚಾರಣೆಯ ಹೊರೆ ತಪ್ಪಿದಂತಾಗಿದೆ. ರಾಜ್ಯ ಸರಕಾರವು ಇಲಾಖಾ ವಿಚಾರಣೆಗಳಲ್ಲಿ ಕರ್ತವ್ಯ ನಿರತ ಅಧಿಕಾರಿಗಳನ್ನು ವಿಚಾರಣಾಧಿಕಾರಿ ಯಾಗಿ ನೇಮಕ ಮಾಡುವು ದರಿಂದ ಅವರು ದಿನ ನಿತ್ಯದ ಕರ್ತವ್ಯದ ಜತೆಗೆ ಅಪರಾಧ, ಕಾನೂನು ಸುವ್ಯವಸ್ಥೆ, ತನಿಖೆ, ಮೇಲ್ವಿಚಾರಣೆ ಮತ್ತು ಇತರ ಕರ್ತವ್ಯಗಳಿಗೆ ಅಡಚಣೆ ಉಂಟಾಗುತ್ತಿತ್ತು. ಜತೆಗೆ ಆದೇಶಿಸಲಾದ ಇಲಾಖಾ ವಿಚಾ ರಣೆಗಳು ಸಹ ತ್ವರಿತವಾಗಿ ಪೂರ್ಣಗೊಳ್ಳುತ್ತಿರಲಿಲ್ಲ. ಇದನ್ನು ಮನಗಂಡಿದ್ದ ಸರ್ಕಾರವು ನಿವೃತ್ತ ನ್ಯಾಯಾಧೀಶರನ್ನು ವಿಚಾರ ಣಾಧಿಕಾರಿಯಾಗಿ ನೇಮಿಸಿಕೊಳ್ಳಲು ಪೊಲೀಸ್ ಇಲಾಖೆಗೆ ಅವಕಾಶ ಕಲ್ಪಿಸಿಕೊಟ್ಟಿದೆ.ಗೆ ಇಲಾಖಾ ವಿಚಾರಣೆಗೆ ಸಮ್ಮತಿಸಿದ 135 ನಿವೃತ್ತ ನ್ಯಾಯಾ ಧೀಶರ ಪಟ್ಟಿಯನ್ನು ಸಹ ಪ್ರಕಟಿಸಿದೆ. ಸೇವೆ ಸಲ್ಲಿಸಲು ಇಚ್ಛೆ ವ್ಯಕ್ತಪಡಿಸಿರುವ ನಿವೃತ್ತ ನ್ಯಾಯಾಧೀಶರ ಹೆಸರುಗಳನ್ನು ಪೊಲೀಸ್ ವಲಯವಾರು ಪ್ರಕಟಿಸಲಾಗಿದೆ. ಅದರಂತೆ, ತಮ್ಮ ಘಟಕಗಳಲ್ಲಿ ಆದೇಶಿಸಲಾಗುವ ಇಲಾಖಾ ವಿಚಾರಣೆಗಳಲ್ಲಿ ನಿವೃತ್ತ ನ್ಯಾಯಾಧೀಶರನ್ನು ವಿಚಾರಣಾ ಅಧಿಕಾರಿಗಳನ್ನಾಗಿ ನೇಮಕ ಮಾಡಿ ಕೊಳ್ಳುವಂತೆ ಎಲ್ಲ ಘಟಕಾಧಿಕಾರಿಗಳಿಗೆ ಡಿಜಿಪಿ ಕಚೇರಿಯಿಂದ ಹಿಂಬರಹ ಹೊರಡಿಸಲಾಗಿದೆ.
ಈ ಹಿಂದೆ ಪೊಲೀಸ್ ಇಲಾಖೆಯಲ್ಲಿ ಕಾನ್‌ಸ್ಟೆಬಲ್, ಎಎಸ್‌ಐ, ಪಿಎಸ್‌ಐ, ಇನ್‌ಸ್ಪೆಕ್ಟರ್‌ಗಳ ವಿರುದ್ಧ ಆರೋಪಗಳು ಕೇಳಿಬಂದರೆ ಎಸಿಪಿ ಮಟ್ಟದ ಅಧಿಕಾರಿಗಳು ಇಲಾಖಾ ವಿಚಾರಣೆ ನಡೆಸಿ ಪೊಲೀಸ್ ಆಯುಕ್ತರು ಅಥವಾ ಎಸ್.ಪಿ. ಹಂತದ ಅಧಿಕಾರಿಗಳಿಗೆ ವರದಿ ನೀಡುತ್ತಿದ್ದರು.
ಇನ್ನು ಎಸ್.ಪಿ. ಮಟ್ಟದ ಐಪಿಎಸ್ ಅಧಿಕಾರಿಗಳ ವಿರುದ್ಧದ ಆರೋಪಗಳಿಗೆ ಸಂಬಂಧಿಸಿದಂತೆ ಐಜಿಪಿ, ಎಡಿಜಿಪಿ ಹಾಗೂ ಅದರಿಂದ ಮೇಲ್ಪಟ್ಟ ರ್‍ಯಾಂಕ್‌ನ ಅಧಿಕಾರಿಗಳು ಇಲಾಖಾ ವಿಚಾರಣೆ ನಡೆಸಿ ಅವರ ಮೇಲಧಿಕಾರಿಗಳಿಗೆ ವರದಿ ಸಲ್ಲಿಸುತ್ತಿದ್ದರು. ಇದೀಗ ಪೊಲೀಸ್ ಇಲಾಖೆಯ ಎಲ್ಲ ಹಂತದ ಸಿಬಂದಿ ಅಥವಾ ಅಧಿಕಾರಿಗಳ ವಿರುದ್ಧದ ಪ್ರಕರಣಗಳ ಇಲಾಖಾ ವಿಚಾರಣೆಯನ್ನು ನಿಯೋಜಿತ ನಿವೃತ್ತ ನ್ಯಾಯಾಧೀಶರೇ ನಿರ್ವಹಿಸಲಿದ್ದಾರೆ. ವಿಚಾರಣಾಧಿಕಾರಿಗಳಾಗಿ ನಿವೃತ್ತ ನ್ಯಾಯಾಧೀಶರು ಪೊಲೀಸ್ ಆಧಿಕಾರಿ ಅಥವಾ ಸಿಬಂದಿಯ ಖುದ್ದು ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಿಕೊಂಡು ವರದಿ ತಯಾರಿಸಿ ಅವರ ಮೇಲಧಿಕಾರಿಗಳಿಗೆ ಸಲ್ಲಿಸಲಿದ್ದಾರೆ. ಇದರ ಆಧಾರದ ಮೇಲೆ ಆರೋಪಿತ ಪೊಲೀಸ್ ಸಿಬಂದಿಯ ಭವಿಷ್ಯ ನಿರ್ಧಾರವಾಗಲಿದೆ.
You must be logged in to post a comment Login