LATEST NEWS
ಚೆನ್ನೈ – ರೈಲಿನ ಬಾಗಿಲ ಬಳಿ ಡ್ಯಾನ್ಸ್ – ಕರೆಂಟ್ ಕಂಬಕ್ಕೆ ಡಿಕ್ಕಿ ಹೊಡೆದು ವಿಧ್ಯಾರ್ಥಿ ಗಂಭೀರ
ಚೆನ್ನೈ ಅಕ್ಟೋಬರ್ 13: ಚೆನ್ನೈನಲ್ಲಿ ಚಲಿಸುತ್ತಿರುವ ರೈಲಿನಲ್ಲಿ ಡ್ಯಾನ್ಸ್ ಮಾಡುವ ವೇಳೆ ಕರೆಂಟ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ವಿಧ್ಯಾರ್ಥಿಯೊಬ್ಬ ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಗಾಯಗೊಂಡ ವಿಧ್ಯಾರ್ಥಿಯನ್ನು ಚೆನ್ನೈನ ಮಾಧವರಂ ಪ್ರದೇಶದ 16 ವರ್ಷದ ಅಭಿಲಾಷ್ ಎಂದು ಗುರುತಿಸಲಾಗಿದೆ. ಈತ ಖಾಸಗಿ ಕಾಲೇಜಿನಲ್ಲಿ ಪ್ರಥಮ ವರ್ಷದ ಹೋಟೆಲ್ ಮ್ಯಾನೇಜ್‌ಮೆಂಟ್ ವಿದ್ಯಾರ್ಥಿ.
ಅಕ್ಟೋಬರ್ 9 ರಂದು, ಸ್ನೇಹಿತರೊಂದಿಗೆ ಪ್ರಯಾಣಿಸುವಾಗ, ಅಭಿಲಾಷ್ ರೈಲಿನ ಫುಟ್‌ಬೋರ್ಡ್‌ನಲ್ಲಿ ನಿಂತು ವಿಡಿಯೋ ಮಾಡಿದ್ದಾನೆ. ಈ ವೇಳೆ ಡ್ಯಾನ್ಸ್ ಮಾಡುತ್ತಾ ರೈಲನ ಹೊರಗೆ ಇಣುಕಿದ್ದು, ಈ ವೇಳೆ ರೈಲಿನ ಕರೆಂಟ್ ಕಂಬವೊಂದು ಡಿಕ್ಕಿ ಹೊಡೆದಿದೆ. ರೈಲಿನಿಂದ ಹೊರಗೆ ಎಸೆಯಲ್ಪಟ್ಟಿದ್ದಾನೆ. ಕೂಡಲೇ ಆತನನ್ನು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾನೆ. ಈ ಸಂಬಂಧ ರಾಯಪುರಂ ಪೊಲೀಸರು ತನಿಖೆ ಆರಂಭಿಸಿದ್ದಾರೆ.
பூமியின் பாரம் குறைந்தது pic.twitter.com/kZqYiT7JhV
— சங்கர் ரஜினி ரசிகன் (@Rajinirasigan53) October 13, 2024