ಟಿಪ್ಪು ಜಯಂತಿ ಹಿನ್ನಲೆ, ಸಂಘರ್ಷಕ್ಕೆ ಜಿಲ್ಲಾಡಳಿತವೇ ಹೊಣೆ-ವಿ.ಹೆಚ್.ಪಿ

ಬಂಟ್ವಾಳ,ನವಂಬರ್ 07: ಬಂಟ್ವಾಳ ತಾಲೂಕಿನಲ್ಲಿ ಟಿಪ್ಪು ಜಯಂತಿ ಆಚರಣೆ ನಡೆಸಬಾರದು ಎಂದು ಒತ್ತಾಯಿಸಿ ವಿಶ್ವ ಹಿಂದೂ ಪರಿಷತ್ ಬಜರಂಗದಳ ಬಂಟ್ವಾಳ ಪ್ರಖಂಡದ ವತಿಯಿಂದ ಗ್ರಹಸಚಿವರಿಗೆ ಮನವಿಯನ್ನು ಬಂಟ್ವಾಳ ತಾಲೂಕು ತಹಶೀಲ್ದಾರ ಹಾಗೂ ಬಂಟ್ವಾಳ ಎ.ಎಸ್.ಪಿ.ಮೂಲಕ ನೀಡಲಾಯಿತು. ‌

ಕನ್ನಡ ವಿರೋಧಿ , ಮತಾಂಧ, ಹಿಂದೂ ದೇವಸ್ಥಾನ ಭಂಜಕ, ಕೊಲೆಗಾರ, ಮೂಲಭೂತ ವಾದಿ ಟಿಪ್ಪು ಸುಲ್ತಾನ್ ಜಯಂತಿ ಆಚರಣೆಯಾಗಲಿ, ಮೆರವಣಿಗೆ ಯಾಗಲಿ ಮಾಡಬಾರದು.

ನಿಗದಿತ ಜಿಲ್ಲಾ ಕಾರ್ಯಕ್ರಮ ವನ್ನು ರದ್ದುಪಡಿಸಬೇಕು ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ಕಾಂಗ್ರೇಸ್ ಸರಕಾರ ಟಿಪ್ಪು ಸುಲ್ತಾನ ನ ಜನ್ಮ ದಿನೋತ್ಸವನ್ನು ನ.10 ರಂದು ಆಚರಿಸಬೇಕೆಂದು ತೆಗೆದುಕೊಂಡಿರುವ ನಿರ್ದಾರ ರಾಜ್ಯದ ಜನತೆಗೆ ಮಾಡಿದ ಅಪಮಾನ ಇದನ್ನು ಬಜರಂಗದಳ ವಿರೋಧಿಸುತ್ತದೆ.

ಈ ಎಲ್ಲಾ ಕಾರಣಗಳಿಂದ ಸರ್ಕಾರ ತೆಗೆದುಕೊಂಡ ತಪ್ಪು ನಿರ್ದಾರದಿಂದ ಹಿಂದೆ ಸರಿದು ನಿರ್ಣಯ ವನ್ನು ರದ್ದು ಮಾಡಬೇಕು.

ಒಂದು ವೇಳೆ ಮನವಿಯನ್ನು ಮೀರಿ ಕಾರ್ಯಕ್ರಮ ಆಯೋಜನೆಯಾದರೆ ಅಂತಹ ಸಂದರ್ಭದಲ್ಲಿ ಏನಾದರೂ ಅನಾಹುತ ಗಳು ನಡೆದರೆ ಜಿಲ್ಲಾಡಳಿತ ವೇ ಹೊಣೆಯಾಗುತ್ತದೆ ಎಂದು ಸಂಘಟನೆ ತನ್ನ ಮನವಿಯಲ್ಲಿ ಎಚ್ಚರಿಸಿದೆ.

Facebook Comments

comments