LATEST NEWS
ಪ್ರಧಾನಿ ನರೇಂದ್ರ ಮೋದಿ ನಕಲಿ ಗೋರಕ್ಷಕ ಹೇಳಿಕೆಗೆ VHP ವಿರೋಧ
ಪ್ರಧಾನಿ ನರೇಂದ್ರ ಮೋದಿ ನಕಲಿ ಗೋರಕ್ಷಕ ಹೇಳಿಕೆಗೆ VHP ವಿರೋಧ
ಮಂಗಳೂರು ಅಕ್ಟೋಬರ್ 17: ಪ್ರಧಾನಿ ನರೇಂದ್ರ ಮೋದಿ ಅವರ ನಕಲಿ ಗೋರಕ್ಷಕ ಎಂಬ ಹೇಳಿಕೆಯನ್ನು ವಿರೋಧಿಸುವುದಾಗಿ ವಿಶ್ವಹಿಂದೂ ಪರಿಷತ್, ಬಜರಂಗದಳ ಹೇಳಿದೆ.
ಈ ಕುರಿತು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ವಿಶ್ವಹಿಂದೂ ಪರಿಷತ್ ನ ಜಿಲ್ಲಾಧ್ಯಕ್ಷ ಜಗದೀಶ್ ಶೇಣವ, ನಮ್ಮ ಅನಿಸಿಕೆ ಪ್ರಕಾರ ದೇಶದಲ್ಲಿ ಯಾರೂ ನಕಲಿ ಗೋರಕ್ಷಕರಿಲ್ಲ ಇರುವವರೆಲ್ಲಾ ಗೋವುಗಳನ್ನು ಪ್ರೀತಿಸುವ ಗೋರಕ್ಷಕರೆ. ಈ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನಕಲಿ ಗೋ ರಕ್ಷಕ ಹೇಳಿಕೆಯನ್ನು ವಿರೋಧಿಸುವುದಾಗಿ ಅವರು ಸ್ಪಷ್ಟಪಡಿಸಿದರು.
ಬೆಂಗಳೂರಿನ ಸಾಪ್ಟವೇರ್ ಇಂಜಿನಿಯರ್ ನಂದಿನಿ ಮೇಲೆ ನಡೆದ ಹಲ್ಲೆಗೆ ಖಂಡನೆ
ಬೆಂಗಳೂರಿನಲ್ಲಿ ಅಕ್ರಮ ಕಸಾಯಿಖಾನೆಯ ಕುರಿತು ಮಾಹಿತಿ ನೀಡಿದ ಸಾಫ್ಟವೇರ್ ಇಂಜಿನಿಯರ್ ನಂದಿನಿ ಅವರ ಮೇಲೆ ದುಷ್ಕರ್ಮಿಗಳಿಂದ ನಡೆದ ಅಮಾನವೀಯ ಹಲ್ಲೆಯನ್ನು ವಿಶ್ವಹಿಂದೂ ಪರಿಷತ್, ಬಜರಂಗದಳ ಖಂಡಿಸುತ್ತಿದೆ ಎಂದು ಹೇಳಿದರು. ನಂದಿನಿ ಅವರ ಕೊಲೆ ಯತ್ನ ನಡೆಸಿದವರನ್ನು ಈ ಕೂಡಲೇ ಬಂಧಿಸಬೇಕು ಹಾಗೂ ಹಲ್ಲೆ ಸಂದರ್ಭದಲ್ಲಿ ನಂದಿನಿ ಅವರನ್ನು ಬಿಟ್ಟು ಪರಾರಿಯಾದ ಇಬ್ಬರು ಪೊಲೀಸ್ ಸಿಬ್ಬಂದಿಗಳ ವಿರುದ್ದ ಈ ಕೂಡಲೇ ಕಾನೂನು ಕ್ರಮ ಜರುಗಿಸಬೇಕೆಂದು ಅವರು ಒತ್ತಾಯಿಸಿದರು. 3 ದಿನಗಳಲ್ಲಿ ಬೇಡಿಕೆ ಈಡೇರದಿದ್ದಲ್ಲಿ ರಾಜ್ಯದಾದ್ಯಂತ ಹೋರಾಟ ನಡೆಸುವುದಾಗಿ ಅವರು ತಿಳಿಸಿದರು.
ಅಕ್ರಮ ಕಸಾಯಿಖಾನೆ ಬಗ್ಗೆ ಮಾಹಿತಿ ನೀಡಿದ್ದಕ್ಕೆ ನಂದಿನಿ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆ ಯತ್ನ ನಡೆಸಲಾಗಿದೆ . ಆದರೆ ಬುದ್ದಿಜೀವಿಗಳು , ಜ್ಯಾತ್ಯಾತೀತವಾದಿಗಳು ಅಂತರಾಷ್ಟ್ರೀಯ ಮಾಧ್ಯಮಗಳಲ್ಲಿ ಮಿಂಚುವವರು ಈವರೆಗೆ ಘಟನೆಗೆ ಖಂಡನೆ ವ್ಯಕ್ತಪಡಿಸದಿರುವ ಬಗ್ಗೆ ಅವರು ಪ್ರಶ್ನಿಸಿದರು.