Connect with us

    LATEST NEWS

    ಶಿವನನ್ನು ಪೂಜಿಸುವ ಲಿಂಗಾಯುತರು ಹಿಂದೂಗಳಲ್ಲದ ಮೇಲೆ ಹಿಂದೂಗಳೆಂದರೆ ಯಾರು- ಪೇಜಾವರ ಶ್ರೀ ಪ್ರಶ್ನೆ

    ಶಿವನನ್ನು ಪೂಜಿಸುವ ಲಿಂಗಾಯುತರು ಹಿಂದೂಗಳಲ್ಲದ ಮೇಲೆ ಹಿಂದೂಗಳೆಂದರೆ ಯಾರು- ಪೇಜಾವರ ಶ್ರೀ ಪ್ರಶ್ನೆ

    ಉಡುಪಿ, ಅಕ್ಟೋಬರ್ 17: ಶಿವನ ಪೂಜೆ ಮಾಡುವ ಲಿಂಗಾಯುತರ ಹಿಂದೂಗಳು ಅಲ್ಲ ಎಂದಾದರೆ ಹಿಂದೂಗಳು ಯಾರು ಎಂದು ಉಡುಪಿ ಪೇಜಾವರ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದರು. ಉಡುಪಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು ವೀರಶೈವ ಹಾಗೂ ಲಿಂಗಾಯುತ ಧರ್ಮಗಳ ಕುರಿತ ವಿಚಾರ ಅವರ ಆಂತರಿಕ ವಿಷಯವಾಗಿದೆ. ಅದರ ಬಗ್ಗೆ ತಾನು ಹಸ್ತಕ್ಷೇಪ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಒರ್ವ ಹೊರಗಿನ ವ್ಯಕ್ತಿಯಾಗಿ ಎಲ್ಲರೂ ಒಂದಾಗಿ ಇರುವಂತಹ ಸಲಹೆಯನ್ನು ಮಾತ್ರ ನೀಡಬಲ್ಲೆ ಎಂದರು. ಇದರಿಂದ ಲಿಂಗಾಯುತ ಸಮಾಜಕ್ಕೆ ಬಲ ಬರುತ್ತದೆ ಎಂದ ಅವರು ತನ್ನ ಈ ಹಿಂದಿನ ಪ್ರಶ್ನೆಗೆ ಇಂದಿನವರೆಗೂ ಉತ್ತರ ಸಿಕ್ಕಿಲ್ಲ ಎಂದರು. ಈ ಎರಡೂ ಸಮಾಜ ತಮ್ಮನ್ನು ಹಿಂದೂ ಧರ್ಮದಿಂದ ಬೇರೆ ಎಂದು ಕರೆದುಕೊಳ್ಳುತ್ತಾರೆ, ಆದರೆ ಶಿವನನ್ನೇ ಸರ್ವೋತ್ತಮ ಎನ್ನುತ್ತಾರೆ. ಪಂಚಾಕ್ಷರಿ ಜಪ,ಲಿಂಗ ಪೂಜೆಗಳನ್ನೂ ಮಾಡುವ ಮೂಲಕ ಎಲ್ಲವನ್ನೂ ಒಪ್ಪಿಕೊಂಡ ಬಳಿಕ ಹಿಂದೂಗಳಲ್ಲ ಎನ್ನೋದು ಹೇಗೆ ಎಂದು ಅವರು ಇದೇ ಸಂದರ್ಭದಲ್ಲಿ ತಮ್ಮ ಪ್ರಶ್ನೆಯನ್ನು ಪುನರುಚ್ಛರಿಸಿದರು. ಜಾತಿ ವ್ಯವಸ್ಥೆಯನ್ನು ಒಪ್ಪದ ಸಾಕಷ್ಟು ಪರಂಪರೆಗಳು ಹಿಂದೂ ಧರ್ಮದಲ್ಲಿ ಈಗಲೂ ಇದೆ. ಈ ವ್ಯವಸ್ಥೆಯನ್ನು ಒಪ್ಪದವರನ್ನು ಹಿಂದೂಗಳು ಎನ್ನಲಾಗದು. ಬಸವಣ್ಣನವರ ದುರಂತಕ್ಕೆ ಬ್ರಾಹ್ಮಣರೇ ಕಾರಣ ಎನ್ನುವುದನ್ನು ಯಾವುದೇ ಕಾರಣಕ್ಕೂ ಒಪ್ಪಲಾಗದು. ಹಳೇ ಕಾಲದಲ್ಲಿ ಬ್ರಾಹ್ಮಣರು ಮಾಡಿದ ತಪ್ಪಿಗೆ ಈಗಿನ ಬ್ರಾಹ್ಮಣರ ಮೇಲೆ ಆರೋಪ ಮಾಡುವುದು ಸರಿಯಲ್ಲ. ಹಿಂದೆ ಆದ ಆನ್ಯಾಯಕ್ಕೆ ಈಗ ಬ್ರಾಹ್ಮಣರು ಏನು ಮಾಡಲು ಸಾಧ್ಯ ಎಂದು ಅವರು ಪ್ರಶ್ನಿಸಿದರು. ಈ ಕಾರಣಕ್ಕಾಗಿ ಹಿಂದೂ ಧರ್ಮವನ್ನು ಬಿಟ್ಟು ಹೊರ ಹೋಗಬೇಡಿ ಎಂದು ಸಹೋದರ ಭಾವನೆಯಿಂದ ಮನವಿ ಮಾಡುವುದಾಗಿ ಹೇಳಿದ ಅವರು ಮಾಧ್ವರಿಂದ ಬಸವಣ್ಣನವರಿಗೆ ಯಾವುದೇ ಅನ್ಯಾಯವಾಗಿಲ್ಲ ಎಂದು ಸ್ಪಷ್ಟಪಡಿಸಿದರು. ಬ್ರಾಹ್ಮಣರಿಂದ ಅನ್ಯಾಯವಾಗುತ್ತದೆ ಎನ್ನುವ ಭಯ ಈಗ ಬೇಡ ಎಂದು ಅವರು ಹೇಳಿದರು.

    Share Information
    Advertisement
    Click to comment

    You must be logged in to post a comment Login

    Leave a Reply