Connect with us

DAKSHINA KANNADA

ಬಹುಮುಖ ಪ್ರತಿಭೆ ರವೀಂದ್ರನಾಥ ಶೆಟ್ಟಿ ನಿಧನ

ಮಂಗಳೂರು, ಮೇ 24: ಕೆನರಾ ಪ್ರೌಢ ಶಾಲೆ ಉರ್ವಾದ ಅಧ್ಯಾಪಕ ಬಹುಮುಖ ಪ್ರತಿಭೆ ರವೀಂದ್ರನಾಥ ಶೆಟ್ಟಿ(೪೪) ಅವರು ಹೃದಯಾಘಾತದಿಂದ ಇಂದು ನಿಧನರಾದರು.

ಮೂಲತಃ ಬಾಕ್ರಬೈಲಿನವರಾಗಿರುವ ಅವರು ಕೆನರಾ ಪ್ರೌಢ ಶಾಲೆಯಲ್ಲಿ ಸುಮಾರು ೨ ದಶಕಗಳಿಂದ ಅಧ್ಯಾಪಕರಾಗಿದ್ದರು. ಎಂಎ, ಎಂಫಿಲ್ ಪದವೀಧರರಾಗಿದ್ದು, ಎನ್‌ಸಿಸಿ ಅಧಿಕಾರಿಯೂ ಆಗಿದ್ದರು. ಎನ್‌ಸಿಸಿಯ ಸಾಧನೆಗಾಗಿ ಹತ್ತು ಹಲವಾರು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.

ಹವ್ಯಾಸಿ ಯಕ್ಷಗಾನ ಮತ್ತು ರಂಗಭೂಮಿ ಕಲಾವಿದರಾಗಿದ್ದ ಅವರು, ಉತ್ತಮ‌ ಕಾರ್ಯಕ್ರಮ‌‌ ನಿರ್ವಾಹಕರೂ ಆಗಿ ಜನಮೆಚ್ಚುಗೆ ಗಳಿಸಿದ್ದರು. ಪತ್ನಿ ದಿವ್ಯಾ, ಮೂರು ವರ್ಷದ ಮಗು ಸೇರಿದಂತೆ ಅಪಾರ ಬಂಧು ವರ್ಗವನ್ನು ಅಗಲಿದ್ದಾರೆ. ರವೀಂದ್ರನಾಥ ಅವರ ಅಗಲುವಿಕೆಗೆ ಕೆನರಾ ಪ್ರೌಢ ಶಾಲೆ ಆಡಳಿತ ಮಂಡಳಿ, ಮುಖ್ಯೋಪಾಧ್ಯಾಯರು, ಅಧ್ಯಾಪಕ ವೃಂದದವರು ಮತ್ತು ವಿದ್ಯಾರ್ಥಿ ಬಳಗ ತೀವ್ರ ಕಂಬನಿ ಮಿಡಿದಿದೆ. ವಿದ್ಯಾರ್ಥಿಗಳಿಗೆ ಅವರು ಅಚ್ಚುಮೆಚ್ಚಿನ ಶಿಕ್ಷಕರಾಗಿದ್ದರು.