KARNATAKA
ವಾಹನ ನೋಂದಣಿಗೆ ಪ್ರಾದೇಶಿಕ ಸಾರಿಗೆ ಕಚೇರಿಗೆ ಹೋಗುವ ಅವಶ್ಯಕತೆ ಇಲ್ಲ, ಬಂದಿದೆ ಆನ್‌ಲೈನ್ ನೋಂದಣಿ ವ್ಯವಸ್ಥೆ
ಬೆಂಗಳೂರು, ಅಕ್ಟೋಬರ್ 27 : ಇನ್ನೂ ವಾಹನಗಳನ್ನು ಪ್ರಾದೇಶಿಕ ಸಾರಿಗೆ ಕಚೇರಿಗೆ ಕೊಂಡೊಯ್ಯದೆ ಆನ್‌ಲೈನ್ ಮೂಲಕವೇ ನೋಂದಣಿ ಮಾಡಿಸುವ ವ್ಯವಸ್ಥೆಯನ್ನು ಸಾರಿಗೆ ಇಲಾಖೆ ಜಾರಿಗೆ ಮಾಡಿದೆ.
ವಾಹನಗಳ ವಿವರಗಳನ್ನು ವಾಹನ್–4 ಪೋರ್ಟಲ್‌ನಲ್ಲಿ ಮಾರಾಟಗಾರರು ನಮೂದಿಸಿ ನೋಂದಣಿಗೆ ತಗಲುವ ತೆರಿಗೆ, ಶುಲ್ಕ ಮತ್ತು ಅರ್ಜಿಯನ್ನು ಆನ್‌ಲೈನ್ ಮೂಲಕ ಸಲ್ಲಿಸಬಹುದಾಗಿದೆ.
‘ಅರ್ಜಿಗಳನ್ನು ಆನ್‌ಲೈನ್‌ನಲ್ಲಿಯೇ ಪರಿಶೀಲಿಸಿ ಅನುಮೋದನೆ ನೀಡಿ ನೋಂದಣಿ ಕ್ರಮಾಂಕ ನೀಡಲಾಗುತ್ತದೆ. ಮಾಲೀಕರು ಮತ್ತು ಸಾರ್ವಜನಿಕರು ಈ ಸೌಲಭ್ಯವನ್ನು ಉಪಯೋಗಿಸಿಕೊಳ್ಳಬೇಕು’ ಎಂದು ಸಾರಿಗೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
You must be logged in to post a comment Login