BELTHANGADI
ಭಗವಂತನನ್ನು ನಿಂದಿಸುವ ಮೂಲಕ ಮೋಕ್ಷ ಪಡೆಯಲು ಪ್ರೋ. ಭಗವಾನ್ ಪ್ರಯತ್ನ – ಡಾ.ಡಿ.ವೀರೇಂದ್ರ ಹೆಗಡೆ

ಭಗವಂತನನ್ನು ನಿಂದಿಸುವ ಮೂಲಕ ಮೋಕ್ಷ ಪಡೆಯಲು ಪ್ರೋ. ಭಗವಾನ್ ಪ್ರಯತ್ನ – ಡಾ.ಡಿ.ವೀರೇಂದ್ರ ಹೆಗಡೆ
ಧರ್ಮಸ್ಥಳ ಜನವರಿ 2: ಕೆಲವರು ಭಗವಂತನನ್ನು ನಿಂದಿಸುವ ಮೂಲಕ ಸ್ತುತಿಸುತ್ತಾರೆ. ಇಂಥವರ ವರ್ಗಕ್ಕೆ ಫ್ರೋ.ಭಗವಾನ್ ಸೇರುತ್ತಾರೆ ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗಡೆ ಅಭಿಪ್ರಾಯಪಟ್ಟಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು ಭಗವಾನ್ ಶ್ರೀ ರಾಮನ ಬಗ್ಗೆ ಶತ್ರುತ್ವ ಬೆಳೆಸಿಕೊಳ್ಳುವ ಮೂಲಕ ರಾಮನನ್ನು ಒಲಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಆ ಮೂಲಕ ಶೀರ್ಘ್ರ ಮೋಕ್ಷ ಪಡೆಯಲಿದ್ದಾರೆ. ಪುರಾಣ ಕಾಲದಲ್ಲಿ ಜಯ-ವಿಜಯ ಎನ್ನುವ ಅಸುರರು ದೇವರ ಬಳಿ ಆದಷ್ಟು ಬರಬೇಕೆಂದು ಭಗವಂತನಲ್ಲಿ ಕೇಳಿಕೊಂಡಾಗ , ಭಗವಂತ ಎರಡು ಆಯ್ಕೆಗಳನ್ನು ಅಸುರರ ಮುಂದಿಟ್ಟಿದ್ದರು.
ಒಂದು ಶತ್ರುವಾಗಿ ಮೂರು ಜನ್ಮ ಕಳೆಯುವುದು, ಇನ್ನೊಂದು ಭಕ್ತನಾಗಿ ಏಳು ಜನ್ಮ ಕಳೆಯುವುದು. ಅಸುರರು ಶತ್ರು ಜನ್ಮದ ಆಯ್ಕೆಯನ್ನು ಒಪ್ಪಿಕೊಂಡು ಭಗವಂತನನ್ನು ಸೇರಿದ್ದರು.

ಅದೇ ಪ್ರಕಾರವೇ ಫ್ರೋ.ಭಗವಾನ್ ಕೂಡಾ ರಾಮನ ವಿರುದ್ಧ ಶತ್ರುತ್ವದ ಸ್ತುತಿ ಮಾಡುವ ಮೂಲಕ ಮೋಕ್ಷ ಪಡೆಯಲು ಪ್ರಯತ್ನಿಸುತ್ತಿರಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.