Connect with us

BELTHANGADI

ಹಠ ತೊಟ್ಟವರಿಗೆ ಸಮಧಾನ ಆಯ್ತಲ್ಲವೇ… ಡಾ. ವಿರೇಂದ್ರ ಹೆಗ್ಗಡೆ

ಹಠ ತೊಟ್ಟವರಿಗೆ ಸಮಧಾನ ಆಯ್ತಲ್ಲವೇ… ಡಾ. ವಿರೇಂದ್ರ ಹೆಗ್ಗಡೆ

ಮಂಗಳೂರು ಜನವರಿ 2: ಶಬರಿಮಲೆ ಸನ್ನಿಧಾನಕ್ಕೆ ಇಬ್ಬರು ಮಹಿಳೆಯರ ಪ್ರವೇಶ ಕುರಿತಂತೆ ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ ವಿರೇಂದ್ರ ಹೆಗ್ಗಡೆ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಶಬರಿಮಲೆ ಪ್ರವೇಶಕ್ಕೆ ಹಠ ತೊಟ್ಟವರಿಗೆ ಸಮಧಾನ ಆಯ್ತಲ್ಲವೇ… ಎನ್ನುವ ಮೂಲಕ ಪರೋಕ್ಷವಾಗಿ ಡಾ.ವೀರೇಂದ್ರ ಹೆಗ್ಗಡೆ ಅಸಮಾಧಾನ ವ್ಯಕ್ತಪಡಿಸಿದರು.

ಧರ್ಮಸ್ಥಳದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಕ್ಷೇತ್ರದ ಆಚಾರ, ಸಂಪ್ರದಾಯ ಪಾಲಿಸುವುದು ಮುಖ್ಯ , ಬ್ರಹ್ಮಚರ್ಯ, ಸಂಯಮ ಸಾಧಿಸಿ ವ್ರತಾಚರಣೆ ಮಾಡಿ ಕ್ಷೇತ್ರಕ್ಕೆ ತೆರಳುತ್ತಾರೆ , ಆದರೆ ಈಗೆಲ್ಲ ಬೆಳಗ್ಗೆ ಮಾಲೆ ಹಾಕಿ ಮಧ್ಯಾಹ್ನ ಸನ್ನಿಧಾನಕ್ಕೆ ಹೋಗುವ ಆಚಾರ ಇದ್ದು ಹೀಗಾಗಿ ಇಂತಹ ಅಪಚಾರಗಳಾಗುತ್ತಿವೆಯೆಂದು ಎಂದು ಡಾ. ಡಿ ವಿರೇಂದ್ರ ಹೆಗ್ಗಡೆ ಯವರು ಹೇಳಿದರು.