Connect with us

  LATEST NEWS

  ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ಸಿಗರು ಹಿಂದೂ ಸಮಾಜದ ಕ್ಷಮೆ ಯಾಚಿಸಿ ಪಾಪವನ್ನು ಕಳೆದುಕೊಳ್ಳಲಿ – ಶಾಸಕ ವೇದವ್ಯಾಸ್ ಕಾಮತ್

  ಮಂಗಳೂರು ಜುಲೈ 08: ಹಿಂದೂಗಳೆಂದು ಕರೆದುಕೊಳ್ಳುವವರು ಸದಾ ಹಿಂಸಾಚಾರ ಮತ್ತು ದ್ವೇಷವನ್ನು ಹರಡುವವರು” ಎಂದು ಹೇಳಿಕೆ ನೀಡುವ ಮೂಲಕ ರಾಹುಲ್ ಗಾಂಧಿ ಮತ್ತೆ ತಾನು ಎಂದಿಗೂ ಅಪ್ರಬುದ್ಧ ಎಂಬುದನ್ನು ಸ್ವತಃ ನಿರೂಪಿಸಿಕೊಂಡದ್ದಕ್ಕೆ ಧನ್ಯವಾದಗಳು ಎಂದು ಶಾಸಕ ವೇದವ್ಯಾಸ ಕಾಮತ್ ಅವರು ಹೇಳಿದರು.


  ಬಿಜೆಪಿ ಜಿಲ್ಲಾ ಯುವ ಮೋರ್ಚಾದ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಶಾಸಕರು, ಮೊದಲೆಲ್ಲಾ ದೇಶದ ಜನತೆ ರಾಹುಲ್ ಗಾಂಧಿಯನ್ನು ಪಪ್ಪು ಎಂದಾಗ ಕಾಂಗ್ರೆಸ್ಸಿಗರು ಕೋಪಿಸಿಕೊಳ್ಳುತ್ತಿದ್ದರು. ಈಗ ಸ್ವತಃ ಕಾಂಗ್ರೆಸ್ಸಿಗರು ಸಹ ದೇಶದ ಜನತೆಯ ಮಾತನ್ನು ಒಪ್ಪಿಕೊಳ್ಳುವ ಸ್ಥಿತಿಗೆ ಬಂದಿದ್ದಾರೆ. ವಿದೇಶದಲ್ಲಿ ನಿಂತುಕೊಂಡು ಭಾರತದ ವಿರುದ್ಧ ಮಾತನಾಡುವುದು, ದೇಶಭಕ್ತರನ್ನು, ಹಿಂದೂ ನಾಯಕರನ್ನು, ಅವಮಾನಿಸುವುದು, ಲೋಕಸಭೆಯಲ್ಲಿ ನಿಂತುಕೊಂಡು ಹಿಂದೂ ಸಮಾಜವನ್ನು ಜರಿಯುವುದು, ಹೀಗೆ ಈ ವ್ಯಕ್ತಿ ಮಾಡುತ್ತಿರುವ ಕೆಲಸಗಳು ಒಂದೆರಡಲ್ಲ. ಬಾಯಿಗೆ ಬಂದ ಹಾಗೆ ಹೇಳಿಕೆ ಕೊಡುವ ಜಾಯಮಾನದ ಈ ರಾಹುಲ್ ಗಾಂಧಿಯ ಅಪ್ರಬುದ್ದ ಹೇಳಿಕೆಯನ್ನು ಖಂಡಿಸುವ ಬದಲು ರಾಜ್ಯ ಕಾಂಗ್ರೆಸ್ ನಾಯಕರೂ ಅದಕ್ಕೆ ಸೊಪ್ಪು ಹಾಕಿರುವುದು ಅತ್ಯಂತ ನಾಚಿಕೆಗೇಡು. ಈ ಮೂಲಕ ಇಡೀ ಕಾಂಗ್ರೆಸ್ ತಾನು ಬಹಿರಂಗವಾಗಿ ಹಿಂದೂ ವಿರೋಧಿ ಎಂಬುದನ್ನು ಒಪ್ಪಿಕೊಂಡಂತಾಗಿದೆ ಎಂದರು.


  ಕಾಂಗ್ರೆಸ್ಸಿಗರ ಕಣ್ಣಿಗೆ ದಂಗೆ ಎಬ್ಬಿಸಿದರೆ, ಹತ್ಯೆ ನಡೆಸಿದರೆ, ಕತ್ತು ಕತ್ತರಿಸಿದರೆ, ಪೊಲೀಸ್ ಠಾಣೆಗೆ ನುಗ್ಗಿದರೆ, ಬೆಂಕಿ ಹಾಕಿದರೆ, ಮಾತ್ರ ಶಾಂತಿ ಪ್ರಿಯ ಸಮಾಜವಾಗಿ ಕಾಣುವುದಾ? ನನ್ನದು ಛತ್ರಪತಿ ಶಿವಾಜಿ ಮಹಾರಾಜ್, ಮಹಾರಾಣಾ ಪ್ರತಾಪ್ ರಂತಹ ವೀರರನ್ನು ಅನುಸರಿಸುವ ಸಮಾಜ. ಎಲ್ಲ ಧರ್ಮಕ್ಕೂ ಗೌರವ ಕೊಡುವುದರ ಜೊತೆಗೆ ನನ್ನ ಧರ್ಮದಲ್ಲಿ ಹೆಮ್ಮೆಯಿಂದ ಜೀವಿಸುತ್ತೇನೆ. ಕಾಂಗ್ರೆಸ್ಸಿಗರ ಹಾಗೆ ಯಾರದ್ದೋ ಓಲೈಕೆಗಾಗಿ, ನಾಲ್ಕು ಓಟಿಗಾಗಿ ನನ್ನ ದೇಶವನ್ನು, ನನ್ನ ಹಿಂದೂ ಧರ್ಮವನ್ನು ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ, ಜೊತೆಗೆ ಅದನ್ನು ಅವಮಾನಿಸಿದರೆ ಸಹಿಸುವುದೂ ಇಲ್ಲ. ಈ ಕೂಡಲೇ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ಸಿಗರು ಹಿಂದೂ ಸಮಾಜದ ಕ್ಷಮೆ ಯಾಚಿಸಿ ಪಾಪವನ್ನು ಕಳೆದುಕೊಳ್ಳಲಿ ಎಂದು ಆಗ್ರಹಿಸಿದರು

  Share Information
  Advertisement
  Click to comment

  You must be logged in to post a comment Login

  Leave a Reply