ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಣಕ್ಕಿಳಿದ ಕನ್ನಡಿಗ ಪತ್ರಕರ್ತನ ನಾಮಪತ್ರ ತಿರಸ್ಕೃತ

ಪುತ್ತೂರು,ಮೇ 02: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾರಣಾಸಿಯಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿದ್ದ ಕನ್ನಡಿಗ ಪತ್ರಕರ್ತ ಡಾ.ಯು.ಪಿ.ಶಿವಾನಂದ ನಾಮಪತ್ರ ತಿರಸ್ಕೃತಗೊಂಡಿದೆ.

ನಾಮಪತ್ರದಲ್ಲಿ ದೋಷ ಕಂಡು ಬಂದ ಹಿನ್ನಲೆಯಲ್ಲಿ ವಾರಣಾಣಿ ಚುನಾವಣಾ ಅಧಿಕಾರಿ ಯು.ಪಿ.ಶಿವಾನಂದ ನಾಮಪತ್ರವನ್ನು ತಿರಸ್ಕರಿದ್ದಾರೆ.

ಹಳ್ಳಿಯಿಂದ ದಿಲ್ಲಿಗೆ ಅಧಿಕಾರ ಎನ್ನುವ ಹೋರಾಟದ ಹಿನ್ನಲೆಯಲ್ಲಿ ಇವರು ಪ್ರಧಾನಿ ಅಭ್ಯರ್ಥಿಗಳ ವಿರುದ್ಧ ಕಣಕ್ಕಿಳಿದಿದ್ದರು.

ಯು.ಪಿ.ಶಿವಾನಂದರು ಅಮೇಠಿಯಲ್ಲೂ ರಾಹುಲ್ ಗಾಂಧಿ ವಿರುದ್ಧ ನಾಮಪತ್ರ ಸಲ್ಲಿಸಿದ್ದು, ಅಲ್ಲಿನ ನಾಮಪತ್ರ ಸ್ವೀಕಾರಗೊಂಡಿದೆ.

ಈ ನಡುವೆ ವಾರಣಾಸಿಯಲ್ಲಿ ತಮ್ಮ ನಾಮಪತ್ರ ಹಿಂಗೆತದ ಕುರಿತು ಚುನಾವಣಾ ಆಯೋಗಕ್ಕೆ ಮೇಲ್ಮನವಿ ಸಲ್ಲಿಸಲೂ ನಿರ್ಧರಿಸಿದ್ದಾರೆ.