ಮೈತ್ರಿಗಾಗಿ ಸೀಟು ತ್ಯಾಗ ಮಾಡಿದ್ದೇನೆ, ಈ ವಿಚಾರದಲ್ಲಿ ನಯಾ ಪೈಸೆಯನ್ನು ಯಾರಿಂದಲೂ ಪಡೆದಿಲ್ಲ- ತುಮಕೂರು ಸಂಸದ ಮುದ್ದೆಹನುಮೇಗೌಡ ಸ್ಪಷ್ಟನೆ

ಬೆಳ್ತಂಗಡಿ,ಮೇ 02:ನಾಮಪತ್ರ ಹಿಂಪಡೆಯುವುದಕ್ಕಾಗಲೀ, ಚುನಾವಣೆ ಪ್ರಕ್ರಿಯೆಯಲ್ಲಿ ಭಾಗವಹಿಸಲು ನಯಾ ಪೈಸೆ ಪಡೆದಿಲ್ಲ ಎಂದು ತುಮಕೂರು ಸಂಸದ ಮುದ್ಧೆ ಹನುಮೇಗೌಡ ಸ್ಪಷ್ಟಪಡಿಸಿದ್ದಾರೆ.
ಧರ್ಮಸ್ಥಳ ಮಂಜುನಾಥೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ ಬಳಿಕ ಅವರು ಮಾಧ್ಯಮಗಳಿಗೆ ಈ ಸ್ಪಷ್ಟೀಕರಣವನ್ನು ನೀಡಿದ್ದಾರೆ.
ತಾನು ನ್ಯಾಯಾಂಗದ ಹಿನ್ನೆಲೆಯಲ್ಲಿ ಬಂದಿರುವ ಕಾರಣದಿಂದ ಚಾರಿತ್ರ್ಯ ಹರಣ ಮಾಡಲು ಪ್ರಯತ್ನಿಸಿದ್ದಾರೆ.
ಹೀಗಾಗಿ ಕೋಟ್ಯಂತರ ಜನರು ನಂಬುವ ಧರ್ಮಸ್ಥಳ ಕ್ಷೇತ್ರದಲ್ಲಿ ಸ್ಪಷ್ಟನೆ ನೀಡುತ್ತಿದ್ದೇನೆ.
ಮೈತ್ರಿ ಅನಿವಾರ್ಯತೆ ಹಿನ್ನೆಲೆಯಲ್ಲಿ ಸೀಟು ತ್ಯಾಗ ಮಾಡುವ ಬಗ್ಗೆ ಮುಖಂಡರು ಒತ್ತಾಯಿಸಿದ್ದರು.
ಟಿಕೆಟ್ ಹಂಚಿಕೆ ಸಂದರ್ಭದಲ್ಲಿ ಮೈತ್ರಿ ಕಾರಣಕ್ಕೆ ಸೀಟು ಕೈತಪ್ಪಿ ಹೋಗಿತ್ತು. ಆದರೆ ಚುನಾವಣೆ ಬಳಿಕ ಯಾರೋ ಅಪ್ರಬುದ್ಧ ವ್ಯಕ್ತಿಗಳಿಬ್ಬರು ಮಾತನಾಡಿದ ಆಡಿಯೋ ಬಂದಿತ್ತು
.
ಈ ಆಡಿಯೋದಲ್ಲಿ ತಾನು ಸ್ವತಂತ್ರವಾಗಿ ಸ್ಪರ್ಧಿಸಿದ್ದ ನಾಮಪತ್ರಿ ಹಿಂಪಡೆಯಲು ಕೋಟ್ಯಾಂತರ ರೂಪಾಯಿ ಪಡೆದುಕೊಂಡಿದ್ದೇನೆ ಎನ್ನುವ ವಿಚಾರವೂ ಉಲ್ಲೇಖವಾಗಿತ್ತು.
ನನ್ನ ರಾಜಕೀಯ ಬೆಳವಣಿಗೆ ಸಹಿಸದ ವಿಕೃತ ಮನಸ್ಸಿನವರು ಈ ಕೃತ್ಯ ಮಾಡಿದ್ದಾರೆ.
ಆದರೆ ಈ ಬಗ್ಗೆ ಅಧಿಕೃತ ವ್ಯಕ್ತಿಗಳು ಯಾರು ಕೂಡ ಕ್ಲಾರಿ ಫೈ ಮಾಡಿಲ್ಲ.
ಮಂಜುನಾಥ ಸ್ವಾಮಿಯ ದರ್ಶನ ಮಾಡಿ, ಸ್ಪಷ್ಟವಾಗಿ ಈ ವಿಚಾರ ತಿಳಿಸುತ್ತಿದ್ದೇನೆ ಎಂದು ಅವರು ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು.