LATEST NEWS
ಮಹಾಮಳೆ ಪರಿಣಾಮ ವರಮಹಾಲಕ್ಷ್ಮೀ ಹಬ್ಬದ ದಿನ ಖಾಲಿ ಹೊಡೆಯುತ್ತಿರುವ ದೇವಸ್ಥಾನಗಳು

ಮಹಾಮಳೆ ಪರಿಣಾಮ ವರಮಹಾಲಕ್ಷ್ಮೀ ಹಬ್ಬದ ದಿನ ಖಾಲಿ ಹೊಡೆಯುತ್ತಿರುವ ದೇವಸ್ಥಾನಗಳು
ಮಂಗಳೂರು ಅಗಸ್ಟ್ 24: ಮಂಗಳೂರು ರಾಜ್ಯದಾದ್ಯಂತ ಸಂಭ್ರಮದಿಂದ ವರಮಹಾಲಕ್ಷ್ಮೀ ಹಬ್ಬವನ್ನು ಆಚರಿಸಲಾಗುತ್ತಿದೆ. ಆದರೆ ಕರಾವಳಿಯಲ್ಲಿ ಮಾತ್ರ ವರಮಹಾಲಕ್ಷ್ಮೀ ಹಬ್ಬದ ಸಂಭ್ರಮ ಸಡಗರ ಅಷ್ಟಾಗಿ ಕಂಡು ಬರುತ್ತಿಲ್ಲ.
ಕರಾವಳಿಯಲ್ಲಿ ಸುರಿದ ಮಹಾಮಳೆ, ಕೊಡಗಿನ ಜಲಪ್ರಳಯದಿಂದ ಮಂಗಳೂರು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಗಳು ಸಂಪೂರ್ಣ ಬಂದ್ ಆಗಿವೆ. ಶಿರಾಡಿ ಘಾಟ್,ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿ ಬಂದ್ ಸಂಪೂರ್ಣ ಬಂದ್ ಆಗಿದ್ದು, ಚಾರ್ಮಾಡಿ ಮೂಲಕ ಮಾತ್ರ ವಾಹನಗಳ ಸಂಚಾರ ಇದೆ.

ಆದರೆ ಚಾರ್ಮಾಡಿ ಸಂಚಾರ ವಿಳಂಬವಾಗುತ್ತಿದೆ, ಅಲ್ಲದೆ ಮಂಗಳೂರಿಗೆ ರೈಲು ಸಂಚಾರವು ಕಷ್ಟ ಸಾಧ್ಯವಾಗಿದೆ. ಕೇರಳದಲ್ಲಿ ಉಂಟಾದ ಜಲಪ್ರಳಯದಿಂದ ಕೇರಳದಿಂದ ಆಗಮಿಸುವ ಭಕ್ತರ ಸಂಖ್ಯೆ ಸಂಪೂರ್ಣ ಇಳಿಮುಖವಾಗಿದೆ.
ಪ್ರತಿವರ್ಷ ವರಮಹಾಲಕ್ಷ್ಮೀ ಹಬ್ಬದಂದು ವಿವಿಧ ದೇವಸ್ಥಾನಗಳಲ್ಲಿ ಲಕ್ಷ್ಮೀ ದೇವಿಗೆ ವಿಶೇಷ ಪೂಜೆ, ಪುನಸ್ಕಾರಗಳು ನಡೆಯುತ್ತವೆ. ವಿಶೇಷವಾಗಿ ದೇವಿ ದೇವಸ್ಥಾನಗಳಲ್ಲಿ ಹೆಣ್ಣು ಮಕ್ಕಳು ಭಾಗಿಯಾಗುತ್ತಾರೆ. ಆದರೆ ಈ ಬಾರಿ ಭಕ್ತರಿಲ್ಲದೆ ದೇವಸ್ಥಾನಗಳು ಬಿಕೋ ಎನ್ನುತ್ತಿವೆ.
ಮಂಗಳೂರು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ ಫುಲ್ ಬಂದ್ ಹಿನ್ನಲೆ, ಕುಕ್ಕೆ ಸುಬ್ರಹ್ಮಣ್ಯ, ಧರ್ಮಸ್ಥಳ, ಕೊಲ್ಲೂರು ದೇವಸ್ಥಾನದಲ್ಲಿ ಭಕ್ತರ ಸಂಖ್ಯೆ ಕಡಿಮೆಯಾಗಿದೆ. ಅಲ್ಲದೆ ಭಕ್ತರಿಲ್ಲದೇ ದೇವಸ್ಥಾನದ ಪೂಜಾ ಸೇವೆಗಳು ಶೇಕಡ 80% ರಷ್ಟು ಕಡಿಮೆಯಾಗಿವೆ.