Connect with us

    LATEST NEWS

    ಯುವತಿಯರಿಗೆ ಲೈಂಗಿಕ ಕಿರುಕುಳ ನೀಡುವ ದಿನವಾಗಿ `ವ್ಯಾಲೆಂಟೈನ್ ಡೇ’ ಆಚರಣೆ – ಹಿಂದೂ ಜನಜಾಗೃತಿ ಸಮಿತಿ ಆರೋಪ

    ಯುವತಿಯರಿಗೆ ಲೈಂಗಿಕ ಕಿರುಕುಳ ನೀಡುವ ದಿನವಾಗಿ `ವ್ಯಾಲೆಂಟೈನ್ ಡೇ’ ಆಚರಣೆ – ಹಿಂದೂ ಜನಜಾಗೃತಿ ಸಮಿತಿ ಆರೋಪ

    ಮಂಗಳೂರು ಫೆಬ್ರವರಿ 12 : `ವ್ಯಾಲೆಂಟೈನ್ ಡೇ’ ಸಂದರ್ಭದಲ್ಲಿ ನಡೆಯುವ ಅಯೋಗ್ಯ ಕೃತ್ಯಗಳನ್ನು ತಡೆಯಲು ಶಾಲಾ-ಮಹಾವಿದ್ಯಾಲಯದಲ್ಲಿ ಮಾತೃ-ಪಿತೃ ಪೂಜನೀಯ ದಿನವನ್ನು ಆಚರಿಸಬೇಕೆಂದು ದಕ್ಷಿಣಕನ್ನಡ ಅಪರ ಜಿಲ್ಲಾಧಿಕಾರಿಗೆ ಹಿಂದೂ ಜನಜಾಗೃತಿ ಸಮಿತಿ ಮನವಿ ಸಲ್ಲಿಸಿದೆ.

    ದೇಶದಲ್ಲಿ 14 ಫೆಬ್ರವರಿಯಂದು `ವ್ಯಾಲೆಂಟೈನ್ ಡೇ’ ಹೆಸರಿನಲ್ಲಿ ಪ್ರೇಮಿಗಳ ದಿನವನ್ನು ಆಚರಿಸುವ ಪದ್ಧತಿಯು ಹೆಚ್ಚಳವಾಗಿದೆ. ದೇಶದಲ್ಲಿ ಈ ಮೂಲಕ ವ್ಯವಹಾರಿಕ ಲಾಭಗಳಿಸುವ ಉದ್ಧೇಶದಿಂದ ಪಾಶ್ಚಾತ್ಯರ ಈ ಅಂದಾನುಕರಣೆಯು ಯುವಕ-ಯುವತಿಯರ ಅನೈತಿಕತೆ ಮತ್ತು ಸ್ವೇಚ್ಚಾಚಾರಕ್ಕೆ ಕಾರಣವಾಗುತ್ತಿದೆ. ಪಾಶ್ಚಾತ್ಯರ ಈ ವ್ಯಾಲೆಂಟೈನ್ ದಿನ ಯುವತಿಯರನ್ನು ಪೀಡಿಸುವ ಮತ್ತು ಅವರಿಗೆ ಹಿಂಸೆ ನೀಡುವ, ಯುವತಿಯರಿಗೆ ಲೈಂಗಿಕ ಕಿರುಕುಳ ನೀಡುವ ದಿನವನ್ನಾಗಿ ಆಚರಿಸುತ್ತಿರುವುದು ಖೇಧದ ಸಂಗತಿಯಾಗಿದೆ.

    ಈ ದಿನ ಪಾರ್ಟಿಯ ಹೆಸರಿನಲ್ಲಿ ಯುವಕ ಯುವತಿಯರು ಮದ್ಯಪಾನ, ದೂಮಪಾನ ಮಾಡುವುದು, ಡ್ರಗ್ ಮಾಫಿಯಾದಂತಹ ಕೃತ್ಯಗಳಿಗೆ ಬಲಿಯಾಗುವುದು ಮುಂತಾದ ಅನುಚಿತ ಘಟನೆಗಳ ಪ್ರಮಾಣ ಹೆಚ್ಚಳವಾಗುತ್ತಿದೆ. ಅಷ್ಟೇಅಲ್ಲದೇ ಈ ದಿನ ಸಮಿಕ್ಷೆಯ ಪ್ರಕಾರ ಗರ್ಭನಿರೋಧಕ ಮಾರಾಟ ಅಧಿಕ ವಾಗುತ್ತಿರುವುದು ಅನೈತಿಕತೆ ಹೆಚ್ಚಾಗುತ್ತಿರುವುದರ ದ್ಯೋತಕವಾಗಿದೆ.ಎಂದ ಹಿಂದೂ ಜನಜಾಗೃತಿ ಸಮಿತಿ ಆರೋಪಿಸಿದೆ. ಈ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ ಮನವಿಯಲ್ಲಿ ಹಿಂದೂ ಜನಜಾಗೃತಿ ಸಮಿತಿಯು ಕೆಲ ಬೇಡಿಕೆಗಳನ್ನು ಇಟ್ಟಿದೆ.

    ವ್ಯಾಲೆಂಟೈನ್ ದಿನದಂದು ವಿಶೇಷ ಪೋಲಿಸ್ ದಳ ರಚಿಸಿ ಶಾಲಾ- ಕಾಲೇಜುಗಳಲ್ಲಿ ಅನುಚಿತ ಕೃತ್ಯ ಮಾಡುವವರ ಮೇಲೆ, ವೇಗದಿಂದ ವಾಹನ ಓಡಿಸುವವರ ಮೇಲೆ ಕ್ರಮ ಜರುಗಿಸುವುದು

    2. ಪ್ರೇಮಿಗಳ ದಿನದಂದು ನಡೆಯುವ ತಪ್ಪು ಪ್ರಕಾರಗಳನ್ನು ಗಮನದಲ್ಲಿರಿಸಿ ಶಾಲಾ-ಪ್ರಾಚಾರ್ಯರ ಬೈಠೆಕ್ ತೆಗೆದುಕೊಂಡು ಅವರಿಗೆ ಮಾತೃಪಿತೃ ಪೂಜನೀಯ ದಿನ ಆಚರಿಸಲು ಈ ನಿಮಿತ್ತ ಲಿಖಿತ ನಿರ್ದೇಶನ ನೀಡಬೇಕೆಂದು ಮನವಿಯಲ್ಲಿ ವಿನಂತಿಸಲಾಗಿದೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *