DAKSHINA KANNADA
ಜಮೀರ್ ನನ್ನ ಪಾಕಿಸ್ತಾನಕ್ಕೆ ಗಡಿಪಾರು ಮಾಡಬೇಕು ನಿಮಗೆ ತಾಕತ್ತಿದ್ಯಾ ಎಸ್ಪಿ ಸಾಹೇಬ್ರೆ .. ವಜ್ರದೇಹಿ ಸ್ವಾಮೀಜಿ ಸವಾಲ್

ಪುತ್ತೂರು ನವೆಂಬರ್ 20: ಮೊದಲು ಸಚಿವ ಜಮೀರ್ ಅಹ್ಮದ್ ಖಾನ್ ನನ್ನು ಪಾಕಿಸ್ತಾನಕ್ಕೆ ಗಡಿಪಾರು ಮಾಡಬೇಕು ಎಂದು ವಜ್ರದೇಹಿ ಸ್ವಾಮಿಜಿ ಆಕ್ರೋಶ ಹೇಳಿದ್ದಾರೆ. ಸುಳ್ಯದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ವಜ್ರದೇಹಿ ಶ್ರೀ ರಾಜಶೇಖರಾನಂದ ಸ್ವಾಮೀಜಿ ಬಜರಂಗದಳ ಕಾರ್ಯಕರ್ತರ ಗಡಿಪಾರು ಆದೇಶ ವಿಚಾರದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.
ಅನಾಮತ್ತಾಗಿ ಬಂದವ ವಕ್ಫ್ ಬೋರ್ಡ್ ಸಚಿವ ಜಮೀರ್, ತಾಕತ್ತಿದ್ರೆ ಜಮೀರ್ ಅಹ್ಮದ್ ಖಾನ್ ನನ್ನ ಗಡಿಪಾರು ಮಾಡಿ, ಇಲ್ಲೆಲ್ಲೂ ಅಲ್ಲ ಜಮೀರ್ ನನ್ನ ಪಾಕಿಸ್ತಾನಕ್ಕೆ ಗಡಿಪಾರು ಮಾಡಬೇಕು ನಿಮಗೆ ತಾಕತ್ತಿದ್ಯಾ ಎಸ್ಪಿ ಸಾಹೇಬ್ರೆ .. ಎಂದು ಪೊಲೀಸ್ ಇಲಾಖೆಗೆ ಸ್ವಾಮೀಜಿ ಸವಾಲ್ ಹಾಕಿದ್ದಾರೆ.

ಹಿಂದೂ ಕಾರ್ಯಕರ್ತರ ಯಾವುದಕ್ಕೋಸ್ಕರ ಕೇಸ್ ಹಾಕೊಂಡ್ರು ..? ಅವಲೋಕನ ಮಾಡಿ, ಗೋವುಗಳನ್ನ ರಕ್ಷಣೆ ಮಾಡಿ ೧೦-೨೦ ಕೇಸ್ ಬಿದ್ದಿದೆ. ಜಿಲ್ಲಾಡಳಿತಕ್ಕೆ ತಾಕತ್ತಿದ್ರೆ ನನ್ನನ್ನ ಗಡಿಪಾರು ಮಾಡಲಿ, ಸರಕಾರಕ್ಕೆ ನಮ್ಮ ಮಕ್ಕಳನ್ನ ಕಂಡರೆ ಭಯ, ಹಿಂದೂ ಕಾರ್ಯಕರ್ತ ಲತೇಶ್ ನನ್ನ ಗಡಿಪಾರು ಮಾಡಬಹದು, ಆದರೆ ಲತೇಶ್ ನಂತಹ ಸಾವಿರ ಯುವಕರು ಹುಟ್ಟಿದ್ರೆ ಮುಂದಿನ ದಿನಗಳು ನಿಮಗೆ ಕಷ್ಟವಾಗಬಹುದು ಎಂದರು.