Connect with us

KARNATAKA

ಕ್ಯಾನ್ಸರ್ ಔಷಧಿ ಮಾಂತ್ರಿಕ ನಾರಾಯಾಣ ಮೂರ್ತಿ ಇನ್ನಿಲ್ಲ….!!

ಶಿವಮೊಗ್ಗ ಜೂನ್ 25: ಹಲವಾರು ದಶಕಗಳಿಂದ ಕ್ಯಾನ್ಸರ್, ಮೂಳೆ ನೋವು, ಮಧುಮೇಹ, ಚರ್ಮರೋಗ ಸೇರಿದಂತೆ ಹಲವು ಮಾರಕ ಕಾಯಿಲೆಗಳಿಗೆ ಔಷಧವನ್ನು ನೀಡುವ ದೇಶ ವಿದೇಶಗಳಲ್ಲಿ ಖ್ಯಾತಿ ಗಳಿಸಿದ್ದ ಶಿವಮೊಗ್ಗದ ನಾರಾಯಣ ಮೂರ್ತಿ ಹೃದಯಾಘಾತದಿಂದ ನಿಧನರಾಗಿದ್ದಾರೆ.


ಹಲವಾರು ದಶಕಗಳಿಂದ ಕ್ಯಾನ್ಸರ್ ಹಾಗೂ ಮಾರಕ ಪೀಡಿತ ಕಾಯಿಲೆಗಳಿಗೆ ಔಷಧವನ್ನು ನೀಡುತ್ತಿದ್ದರು. ರಾಜ್ಯ ದೇಶ ವಿದೇಶಗಳಿಂದ ಇವರ ಬಳಿ ಔಷಧಿಗಾಗಿ ಸಾವಿರಾರು ಜನರು ದಿನಂಪ್ರತಿ ಬರುತ್ತಿದ್ದರು. ಕ್ಯಾನ್ಸರ್ ಔಷಧಿಯ ಮಾಂತ್ರಿಕ ಎಂದೇ ನಾರಾಯಣ ಮೂರ್ತಿ ಖ್ಯಾತಿ ಪಡೆದಿದ್ದರು.

ಆನಂದಪುರ ಸಮೀಪದ ನರಸೀಪುರದ ನಾಟಿ ವೈದ್ಯರಾದ ನಾರಾಯಣಮೂರ್ತಿಯವರು ಹೃದಯಾಘಾತದಿಂದ ಸಾವನ್ನಪ್ಪಿದ್ದು, ಪತ್ನಿ, ಮಗ ಹಾಗೂ ನಾಲ್ವರು ಪುತ್ರಿಯರನ್ನು ಅಗಲಿದ್ದಾರೆ.

Facebook Comments

comments