Connect with us

LATEST NEWS

ಅಲ್ಪಸಂಖ್ಯಾತರಿಗೆ ಮಾತ್ರ ಅವಕಾಶ -ಖಾದರ್ ಸ್ವಧರ್ಮ ಪ್ರೇಮ

ಅಲ್ಪಸಂಖ್ಯಾತರಿಗೆ ಮಾತ್ರ ಅವಕಾಶ -ಖಾದರ್ ಸ್ವಧರ್ಮ ಪ್ರೇಮ

ಮಂಗಳೂರು ಫೆಬ್ರವರಿ 12: ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ದಕ್ಷಿಣಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ ಖಾದರ್ ಅವರಿಗೆ ಸ್ವಧರ್ಮಿಯರ ಮೇಲೆ ಒಲವು ಹೆಚ್ಚಾಗಿದೆಯೇ ? ಎಂಬ ಅನುಮಾನ ಈಗ ಜಿಲ್ಲೆಯಲ್ಲಿ ಮೂಡಲಾರಂಭಿಸಿದೆ.

ಉಳ್ಳಾಲ ನಗರಸಭಾ ವ್ಯಾಪ್ತಿಯಲ್ಲಿ ಕಡಲ್ಕೊರೆತದಿಂದ ಸಂತ್ರಸ್ತರಾದ ಕುಟುಂಬಗಳಿಗೆ ಕೋಟೆಕಾರು ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ನಿವೇಶನ ಒದಗಿಸಲು ಜಿಲ್ಲಾಡಳಿತದ ಮುಂದಾಗಿರುವುದು ಹಾಗೂ ದಕ್ಷಿಣ ಕನ್ನಡ ಜಿಲ್ಲಾಡಳಿತದ ಈ ನಿರ್ಧಾರ ಸದ್ಯ ವಿವಾದಕ್ಕೆ ಕಾರಣವಾಗಿದೆ. ಅಲ್ಲದೆ ಜಿಲ್ಲಾಡಳಿತದ ಈ ನಿರ್ಧಾರದ ಹಿಂದೆ ಯು ಟಿ ಖಾದರ್ ಹಸ್ತಕ್ಷೇಪ ಇದೆ ಎಂದು ಆರೋಪಿಸಲಾಗುತ್ತಿದ್ದು. ಜಿಲ್ಲಾಡಳಿತದ ಈ ನಿರ್ಧಾರದ ವಿರುದ್ಧ ಕೋಟೆಕಾರು ಪಟ್ಟಣ ಪಂಚಾಯತ್ ಆಕ್ಷೇಪವೆತ್ತಿದೆ.

ಈ ಮಧ್ಯೆ ಉಳ್ಳಾಲ ನಗರಸಭಾ ವ್ಯಾಪ್ತಿಯ ಕಡಲ್ಕೊರೆತ ಸಂತ್ರಸ್ತರಿಗೂ ರಿಗೆ ಕೋಟೆಕಾರು ವ್ಯಾಪ್ತಿಯಲ್ಲಿ ನಿವೇಶನ ಒದಗಿಸಲು ಜಿಲ್ಲಾಡಳಿತ ಮುಂದಾಗಿದೆ . ಈ ಸಂಬಂಧ ಸಹಾಯಕ ಆಯುಕ್ತ ರ ಉಸ್ತುವಾರಿಯಲ್ಲಿ ಸ್ಥಳ ಗುರುತಿಸಿ ಸರ್ವೆ ಕಾರ್ಯ ಕೂಡ ನಡೆದಿದೆ. ಒಟ್ಟು 143 ಫಲಾನುಭವಿಗಳಿಗೆ ಸುಮಾರು 500 ಚದರ ಅಡಿಯ ಮನೆ ನಿರ್ಮಿಸಲು ಯೋಜನೆ ಸಿದ್ಧಗೊಂಡಿದ್ದು ಕೋಟೆಕಾರು ವ್ಯಾಪ್ತಿಯ ಸರ್ವೆ 222 ರಲ್ಲಿ 1.42 ಎಕರೆ ಭೂಮಿಯನ್ನು ಸಮತಟ್ಟು ಮಾಡುವ ಕೆಲಸ ಕೂಡ ನಡೆದಿದೆ .

ಕಡಲ್ಕೊರೆತ ಸಮಸ್ಯೆ ಯಲ್ಲಿ ಮನೆ ಕಳೆದುಕೊಂಡು ಸದ್ಯ ಫಲಾನುಭವಿಗಳಾಗಿರುವ 143 ಜನ ಪಟ್ಟಿಯಲ್ಲಿ ಬಹುತೇಕ ಎಲ್ಲರೂ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರಾಗಿದ್ದು, ಇದರಲ್ಲಿ ಸಚಿವ ಯು.ಟಿ ಖಾದರ್ ಅವರ ಸ್ವಧರ್ಮ ಪ್ರೇಮ ಎದ್ದು ಕಾಣುತ್ತಿದೆ ಎಂದು ಆರೋಪಿಸಲಾಗಿದೆ.

ಕಳೆದ 20 ವರ್ಷಗಳಿಂದ ಕೋಟೆಕಾರು ಪಟ್ಟಣ ಪಂಚಾಯತ್ ವ್ಯಾಪ್ತಿಯ ನಿವೇಶನ ರಹಿತರಿಗೆ ಮನೆ ಒದಗಿಸುವಂತೆ ಕೋರಿ ಸರಿ ಸುಮಾರು 600 ಕ್ಕೂ ಅಧಿಕ ಅರ್ಜಿಗಳು ಸಲ್ಲಿಕೆಯಾಗಿದ್ದರೂ ಈ ವರೆಗೆ ಒಬ್ಬರಿಗೂ ನಿವೇಶನ ಹಂಚಿಕೆ ಯಾಗಿಲ್ಲ. ಈ ಹಿಂದೆ ಗ್ರಾಮ ಪಂಚಾಯತ್ ಆಗಿದ್ದ ಕೋಟೆಕಾರು ಸದ್ಯ ಪಟ್ಟಣ ಪಂಚಾಯತ್ ಆಗಿ ಮೇಲ್ದರ್ಜೆಗೆ ಬಂದು 4 ವರ್ಷಗಳೇ ಕಳೆದಿದ್ದರೂ ಈ ವ್ಯಾಪ್ತಿಯ ನಿವೇಶನ ರಹಿತರಿಗೆ ಭೂಮಿ ಸಿಕ್ಕಿಲ್ಲ ಎನ್ನುವುದು ಪಂಚಾಯಿತಿ ಆಡಳಿತ ಆರೋಪ.

ಆದರೆ ಏಕಾಏಕಿ ಉಳ್ಳಾಲ ನಗರಸಭಾ ವ್ಯಾಪ್ತಿಯ ಕಡಲ್ಕೊರೆತ ಸಂತ್ರಸ್ಥರಿಗೆ ನಿವೇಶನ ಹಂಚಿಕೆ ಮಾಡಲು ತಯಾರಾಗಿರುವುದು ಸಾಕಷ್ಟು ಅನುಮಾನಕ್ಕೆ ಎಡೆಮಾಡಿದೆ.

ವರ್ಷಗಳು ಉರುಳಿದರೂ ನಿವೇಶನ ಲಭ್ಯವಾಗದೆ ಈ ವ್ಯಾಪ್ತಿಯ ಅನೇಕ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆಯಾಗಿದೆ ಎನ್ನುವುದು ಕೋಟೆಕಾರು ಪಂಚಾಯಿತಿ ಆರೋಪ . ಹೀಗಿರುವಾಗ ಏಕಾಏಕಿ ಕಡಲ್ಕೊರೆತ ಸಂತ್ರಸ್ತರಿಗೆ ಭೂಮಿ ಒದಗಿಸಿದರೆ ಸದ್ಯ ಸಮಸ್ಯೆ ಪರಿಹಾರವಾಗದೆ ಉಳಿಯಲಿದೆ ಎನ್ನುವುದು ಕೋಟೆಕಾರು ಪಂಚಾಯಿತಿಯ ಆಕ್ಷೇಪ ಕಾರಣ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *