Connect with us

    LATEST NEWS

    ಮುಚ್ಚಿ ಹೋಗಲಿದ್ದ ನಾಲ್ವರ ಕೊಲೆ ಪ್ರಕರಣಕ್ಕೆ ಟ್ವಿಸ್ಟ್ ನೀಡಿದ ಪುಣೆಯ ವಿಧಿ ವಿಜ್ಞಾನ ಪ್ರಯೋಗಾಲಯ

    ಮುಚ್ಚಿ ಹೋಗಲಿದ್ದ ನಾಲ್ವರ ಕೊಲೆ ಪ್ರಕರಣಕ್ಕೆ ಟ್ವಿಸ್ಟ್ ನೀಡಿದ ಪುಣೆಯ ವಿಧಿ ವಿಜ್ಞಾನ ಪ್ರಯೋಗಾಲಯ

    ಪುತ್ತೂರು ಫೆಬ್ರವರಿ 13: ಪುತ್ತೂರಿನ ರೆಂಜ ಗ್ರಾಮದ ಕಕ್ಕೂರು ಎಂಬಲ್ಲಿ ನಡೆದ ಒಂದೆ ಮನೆಯ ನಾಲ್ವರ ಕೊಲೆ ಪ್ರಕರಣಕ್ಕೆ ಈಗ ಮತ್ತೊಂದು ಟ್ವಿಸ್ಟ್ ದೊರತಿದೆ. 2012ರ ಜೂನ್ 12 ರಂದು ಬೆಳಕಿಗೆ ಬಂದ ಈ ಕೊಲೆ ಪ್ರಕರಣ ಇದಾಗಿದೆ. ಇನ್ನೆನು ಮುಚ್ಚಿ ಹೋಗಲಿದ್ದ ಪ್ರಕರಣಕ್ಕೆ ಪುಣೆಯ ವಿಧಿ ವಿಜ್ಞಾನ ಪ್ರಯೋಗಾಲಯ ಈ ಪ್ರಕಣಕ್ಕೆ ಮತ್ತೊಂದು ಟ್ವಿಸ್ಟ್ ನೀಡಿದೆ.

    ಭಾರೀ ಕುತೂಹಲ ಕೆರಳಿಸಿದ್ದ 2012 ರ ಜೂನ್ 12 ರಂದು ಬೆಳಕಿಗೆ ಬಂದ ಒಂದೇ ಮನೆಯ ನಾಲ್ವರ ಕೊಲೆ ಪ್ರಕರಣಕ್ಕೆ ಇದೀಗ ಮತ್ತೊಂದು ಟ್ವಿಸ್ಟ್ ದೊರೆತಿದೆ. ಪುತ್ತೂರು ತಾಲೂಕಿನ ರೆಂಜ ಗ್ರಾಮದ ಕಕ್ಕೂರು ಎಂಬಲ್ಲಿ ನಡೆದ ಈ ಕೊಲೆ ಪ್ರಕರಣ ಬೆಳಕಿಗೆ ಬಂದ ಬಳಿಕ ಮನೆಯ ಯಜಮಾನ ಕಕ್ಕೂರು ವೆಂಕಟರಮಣ ಭಟ್ ನಾಪತ್ತೆಯಾಗಿದ್ದರು.

    ಕೊಲೆ ಪ್ರಕರಣ ಬೆಳಕಿಗೆ ಬಂದ 3 ದಿನಗಳ ಬಳಿಕ ಕಕ್ಕೂರು ಕಾಡಿನಲ್ಲಿ ಗಂಡಸಿನ ಅಸ್ಥಿಪಂಜರವೊಂದು ಪತ್ತೆಯಾಗಿದ್ದು, ಇದು ವೆಂಕಟರಮಣ ಭಟ್ ರದ್ದೇ ಎಂದು ತೀರ್ಮಾನಿಸಿ ಪ್ರಕರಣವನ್ನು ಮುಚ್ಚುವ ತೀರ್ಮಾನಕ್ಕೂ ಬರಲಾಗಿತ್ತು.

    ವೆಂಕಟರಮಣ ಭಟ್ ತನ್ನ ಪತ್ನಿ ಸಂಧ್ಯಾ, ಮಕ್ಕಳಾದ ಹರಿ ಗೋವಿಂದ, ವೇದ್ಯಾ ಮತ್ತು ವಿನುತಾ ಅವರನ್ನು ಕೊಲೆ ಮಾಡಿ ಆತ್ಮಹತ್ಯೆ ಮಾಡಿಕೊಂಡಿರಬೇಕೆಂದು ತಿಳಿಯಲಾಗಿತ್ತು. ಆದರೆ ಪುಣೆಯ ವಿಧಿ ವಿಜ್ಞಾನ ಪ್ರಯೋಗಾಲಯ ನೀಡಿದ ವರದಿಯಲ್ಲಿ ಅಸ್ಥಿಪಂಜರಕ್ಕೂ, ಕಕ್ಕೂರು ವೆಂಕಟರಮಣ ಭಟ್ ರ ಸೋದರನ ರಕ್ತದ ಮಾದರಿಗೂ ಸರಿಹೊಂದುವುದಿಲ್ಲ ಎಂದು ವರದಿ ನೀಡಿದೆ.

    ಮನೆ ಮಂದಿಯ ಕೊಲೆ ಪ್ರಕರಣ ಬೆಳಕಿಗೆ ಬರುವ ಮೊದಲು ಈ ಮನೆಯಲ್ಲಿ ದರೋಡೆ ಕೂಡಾ ನಡೆದಿತ್ತು. ನಾಗಮಣಿ‌ ಶೋಧದ ಯತ್ನವೂ ಈ ಮನೆ ಪರಿಸರದಲ್ಲಿ ನಡೆಯುತ್ತಿತ್ತು ಎನ್ನುವ ಆರೋಪವನ್ನೂ ವೆಂಕಟರಮಣ ಭಟ್ ಮಾಡುತ್ತಿದ್ದರು.

    ಇದೀಗ ಹತ್ಯೆಯಲ್ಲಿ ಭಟ್ ಕೈವಾಡವಿಲ್ಲ ಎನ್ನುವುದಾದರೆ ಇದರ ಹಿಂದಿನ ಕೈವಾಡ ಯಾರದು ಎನ್ನುವ ಪತ್ತೆ ಕಾರ್ಯ ಇನ್ನು ನಡೆಯಬೇಕಿದೆ.

    Share Information
    Advertisement
    Click to comment

    You must be logged in to post a comment Login

    Leave a Reply