ಕೊಲ್ಲೂರು ಮೂಕಾಂಬಿಕೆಯ ದರ್ಶನ ಪಡೆದ ಪ್ರಧಾನಿ ನರೇಂದ್ರ ಮೋದಿ ಸಹೋದರ

ಉಡುಪಿ ಫೆಬ್ರವರಿ 13: ಕರಾವಳಿಯ ಜಿಲ್ಲೆಯ ಭೇಟಿಯಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರ ಸಹೋದರ ಪ್ರಹ್ಲಾದ್ ಮೋದಿ ಅವರು ಇಂದು ಕೊಲ್ಲೂರು ಶ್ರೀಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.

ಪ್ರಹ್ಲಾದ್ ಮೋದಿ ಅವರು ಬಹುಕಾಲದಿಂದ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಬೇಕು ಎಂದುಕೊಂಡಿದ್ದರು. ಆದರೆ ಇಂದು ಅವರು ದೇವಸ್ಥಾನಕ್ಕೆ ಆಗಮಿಸಿ ಚಂಡಿಕಾ ಹೋಮವನ್ನು ನಡೆಸಿದ್ದಾರೆ. ಈ ವೇಳೆ ದೇವಾಲಯದ ಇಓ ಕೃಷ್ಣಮೂರ್ತಿ ಅವರು ಪ್ರಹ್ಲಾದ್ ಮೋದಿಯನ್ನು ಗೌರವಿಸಿದ್ದಾರೆ.

ಪೂಜೆ ವೇಳೆ ಪ್ರಹ್ಲಾದ್ ಮೋದಿ ಅವರು ಸಾಂಪ್ರದಾಯಿಕ ಉಡುಗೆ (ಬಿಳಿ ಪಂಜೆ ಹಾಗೂ ಶಲ್ಯೆ) ಧರಿಸಿ ಪೂಜೆ ಹಾಗೂ ಚಂಡಿಕಾ ಹೋಮದಲ್ಲಿ ಭಾಗಿಯಾಗಿದ್ದರು.

3 Shares

Facebook Comments

comments