LATEST NEWS
ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿರುವ ಮಿಥುನ್ ರೈ ರೋಡ್ ಚಾಲೆಂಜ್

ಮಂಗಳೂರು ಸೆಪ್ಟೆಂಬರ್ 30: ಕರಾವಳಿಯನ್ನು ಸಂಪರ್ಕಿಸುವ ಪ್ರಮುಖ ರಾಷ್ಟ್ರೀಯ ಹೆದ್ದಾರಿಯ ಸದ್ಯದ ಪರಿಸ್ಥಿತಿ ತಿಳಿಸುವ ರೋಡ್ ಚಾಲೆಂಜ್ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ.
ಕರಾವಳಿ ಜಿಲ್ಲೆಗಳನ್ನು ಬೆಂಗಳೂರು, ಗೋವಾ, ಕೊಚ್ಚಿ, ಮಹಾರಾಷ್ಟ್ರದ ಸೋಲಾಪುರ ಮೊದಲಾದ ಪ್ರಮುಖ ನಗರಗಳನ್ನು ಸಂಪರ್ಕಿಸುವ ಪ್ರಮುಖ ಹೆದ್ದಾರಿಗಳಿ ಸಂಪೂರ್ಣವಾಗಿ ಹದಗೆಟ್ಟಿದೆ. ಈ ಹಿನ್ನಲೆ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿರುವ ಚಾಲೆಂಜ್ ಗಳ ಜೊತೆ ಈ ಬಾರಿ ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ರೋಡ್ ಚಾಲೆಂಜ್ ನ್ನು ಕೇಂದ್ರ ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿಗೆ ಅವರಿಗೆ ಹಾಕಿದ್ದಾರೆ.

ರಾಷ್ಟ್ರೀಯ ಹೆದ್ದಾರಿ 75ರ ಮಂಗಳೂರು-ಬೆಂಗಳೂರು, ರಾಷ್ಟ್ರೀಯ ಹೆದ್ದಾರಿ 169ರ ಮಂಗಳೂರು-ಸೋಲಾಪುರ ರಸ್ತೆ ಸಂಪೂರ್ಣ ಕೆಟ್ಟಿದ್ದು, ಸಂಚಾರಕ್ಕೆ ವಾಹನ ಸವಾರರು ಹರಸಾಹಸಪಡುತ್ತಿದ್ದಾರೆ. ಬೆಂಗಳೂರಿನಿಂದ ಮಂಗಳೂರಿಗೆ 6-7 ಗಂಟೆಯ ಪ್ರಯಾಣಕ್ಕೆ 9-10 ಗಂಟೆ ಸಾಲುತ್ತಿಲ್ಲ. ಕುಲಶೇಖರ-ವಾಮಂಜೂರು ನಡುವೆ ಪ್ರತಿನಿತ್ಯ ಅಪಘಾತ ನಡೆಯುತ್ತಿದೆ.
ರಸ್ತೆ ದುರಸ್ತಿಗೆ ಹೆದ್ದಾರಿ ಇಲಾಖೆಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಸಚಿವ ನಿತಿನ್ ಗಡ್ಕರಿ, ಸಂಸದರಾದ ನಳಿನ್‌ಕುಮಾರ್ ಕಟೀಲು, ಪ್ರಜ್ವಲ್ ರೇವಣ್ಣ ಅವರಿಗೆ ಟ್ವೀಟ್ ಮಾಡಿದ್ದಾರೆ.
ಮಿಥುನ್ ರೈ ತಮ್ಮ ಪೇಸ್‌ಬುಕ್ ಪುಟ ಹಾಗೂ ಟ್ವಿಟ್ಟರ್‌ನಲ್ಲಿ ‘ರೋಡ್ ಚಾಲೆಂಜ್’ ಹ್ಯಾಷ್ ಟ್ಯಾಗ್ ಬಳಸಿ ವಿಡಿಯೋ ಪೋಸ್ಟ್ ಮಾಡಿದ್ದು, ಇದನ್ನು ಹಲವರು ರಿಟ್ವೀಟ್-ಶೇರ್ ಮಾಡಿ ಬೆಂಬಲಿಸಿದ್ದಾರೆ. ಹದಗೆಟ್ಟ ಹೆದ್ದಾರಿಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.