LATEST NEWS
ತನ್ನ ಪ್ರೀತಿಯ ನಾಯಿಗೆ ಅರ್ಧ ಆಸ್ತಿಯನ್ನು ವಿಲ್ ಮಾಡಿದ ರೈತ…!

ಮಧ್ಯಪ್ರದೇಶ, ಡಿಸೆಂಬರ್ 31 : ತಾನು ಮಾಡಿಟ್ಟಿರುವ ಆಸ್ತಿಯನ್ನು ಪುತ್ರರಿಗೆ, ಪತ್ನಿಗೆ ತಮ್ಮ ಆಸ್ತಿ ಸಿಗಲಿ ಎಂಬುದಾಗಿ ಆಸ್ತಿಯನ್ನು ವಿಲ್ ಬರೆದಿಡೋದನ್ನು ಕೇಳಿದ್ದೀರಿ. ಆದ್ರೇ ಈ ರೈತ ತನ್ನ ನೆಚ್ಚಿನ ನಾಯಿ ಮೇಲಿನ ಪ್ರೀತಿಯಿಂದಾಗಿ ಖುದ್ದು ಮಗನಿಗೂ ತನ್ನ ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ ಆಸ್ತಿಯನ್ನು ವಿಲ್ ಮಾಡಿಕೊಡದೇ, ತನ್ನ ನೆಚ್ಚಿನ ನಾಯಿಗೆ ನೀಡದ್ದಾರೆ.
ಮಧ್ಯಪ್ರದೇಶದ ಚಿಂದ್ವಾರಾದ ಬಡಾ ಗ್ರಾಮದಲ್ಲಿನ 50 ವರ್ಷದ ರೈತ ಓಂ ನಾರಾಯಣ್ ವರ್ಮಾ ಎಂಬುವರು, ಸಿರಿವಂತಿಕೆಗೇನು ಕಡಿಮೆ ಇರಲಿಲ್ಲ. ಇಂತಹ ರೈತ ನಾರಾಯಣ್ ಪ್ರೀತಿಯಿಂದ ಸಾಕಿದಂತ ನಾಯಿ ಜಾಕಿ ಮೇಲೆ ಎಲ್ಲಿಲ್ಲದ ಪ್ರೀತಿ. ಇದೇ ಕಾರಣಕ್ಕಾಗಿ ತಮ್ಮ ಮರಣಾನಂತ್ರ, ತನ್ನ ನಾಯಿಯನ್ನು ನೋಡಿಕೊಳ್ಳಲು ಯಾರೂ ಅಸಡ್ಡೆ ತೋರಬಾರದು ಎನ್ನುವ ಕಾರಣಕ್ಕಾಗಿ, ಕೋಟ್ಯಾಂತರ ಆಸ್ತಿಯನ್ನು 11 ತಿಂಗಳ ಜಾಕಿ ನಾಯಿಯ ಹೆಸರಿಗೆ ವಿಲ್ ಮಾಡಿಟ್ಟಿದ್ದಾರೆ.

ಇದೇನಪ್ಪಾ ಇವರಿಗೆ ಮಗ ಇಲ್ವಾ ಆತನಿಗೆ ವಿಲ್ ಮಾಡಬಹುದಾಗಿತ್ತಾ ಅಂತ ಯೋಚಿಸಬೇಡಿ. ಒಬ್ಬ ಮಗನಿದ್ದೂ, ಆತನ ಮೇಲೆ ನಂಬಿಕೆ ಇಲ್ಲದೇ, ತನ್ನ ಕೋಟ್ಯಾಂತರ ರೂಪಾಯಿ ಮೌಲ್ಯ 18 ಎಕರೆ ತೋಟವನ್ನು ಪ್ರೀತಿಯ ನಾಯಿ ಜಾಕಿ ಹಾಗೂ ಇನ್ನುಳಿದ ಆಸ್ತಿಯನ್ನು ತನ್ನ ಎರಡನೇ ಪತ್ನಿಯ ಹೆಸರಿಗೆ ಬರೆದಿಟ್ಟಿದ್ದಾನೆ.
ರೈತ ನಾರಾಯಣ ವರ್ಮಾ ಅವರ ಮೊದಲ ಪತ್ನಿಯನ್ನು ಧನ್ವಂತರಿ ವರ್ಮಾ ಎಂದು ಗುರುತಿಸಲಾಗಿದೆ. ಇವರಿಗೆ ಮೂರು ಹೆಣ್ಣು ಮಕ್ಕಳು ಹಾಗೂ ಒಬ್ಬ ಗಂಡು ಮಗನಿದ್ದಾನೆ. ಅಲ್ಲದೆ ಎರಡನೇ ಪತ್ನಿ ಚಂಪಾ ಅವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಯಾರಿಗೂ ಆಸ್ತಿ ಬರೆಯದೆ ನಾಯಿ ಹಾಗೂ ತಮ್ಮ ಎರಡನೇ ಪತ್ನಿಗೆ ಮಾತ್ರ ಆಸ್ತಿ ಬರೆದಿದ್ದಾರೆ.
ಇದು ಸರಿಯಲ್ಲ, ಹೀಗೆ ಮಾಡಬೇಡಿ. ಮಗನಿದ್ದಾನೆ. ನಾಯಿ ಸತ್ತ ಮೇಲೆ ಆಸ್ತಿ ಹೇಗೆ ಬೇರೆಯವರಿಗೆ ವರ್ಗಾವಣೆಯಾಗಬೇಕು ಎನ್ನುವ ಬಗ್ಗೆ ಗ್ರಾಮಸ್ಥರು ನಾರಾಯಣ್ ಪ್ರಶ್ನಿಸಿದ್ರೇ. ನನ್ನ ಮಗನ ಮೇಲೆ ನಂಬಿಕೆ ಇಲ್ಲ. ಯಾರು ತನ್ನ ನಿಧನದ ನಂತ್ರ ಪ್ರೀತಿಯ ನಾಯಿ ಜಾಕಿಯನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೋ ಅವರಿಗೆ ಆ ಕೋಟ್ಯಾಂತರ ರೂಪಾಯಿ ಆಸ್ತಿ ಸೇರಲಿದೆ ಎಂಬುದಾಗಿ ತಿಳಿಸಿದ್ದಾನೆ. ಈ ಮೂಲಕ ತನ್ನ ನೆಚ್ಚಿನ ‘ನಾಯಿ ಮೇಲಿನ ಪ್ರೀತಿ’ಗೆ ಮನಸೋತ ‘ಮಾಲೀಕ’ ನಾರಾಯಣ್ ಕೋಟ್ಯಾಂತರ ರೂಪಾಯಿ ಆಸ್ತಿಯನ್ನೇ ಅದರ ಹೆಸರಿನಲ್ಲಿ ವಿಲ್ ಬರೆದಿಟ್ಟಿದ್ದಾನೆ.