ಮಧ್ಯ ಪ್ರದೇಶ ಚುನಾವಣಾ ಕರ್ತವ್ಯಕ್ಕೆ ಉಪ್ಪಿನಂಗಡಿ ಘಟಕದ ಗೃಹ ರಕ್ಷಕ ಸಿಬ್ಬಂದಿ

ಪುತ್ತೂರು ನವೆಂಬರ್ 26: ಉಪ್ಪಿನಂಗಡಿ ಘಟಕದ ಗೃಹ ರಕ್ಷಕ ಸಿಬ್ಬಂದಿಗಳು ಮಧ್ಯಪ್ರದೇಶದಲ್ಲಿ ನಡೆಯುವ ವಿಧಾನ ಸಭಾ ಚುನಾವಣಾ ಬಂದೋಬಸ್ತ್ ಕರ್ತವ್ಯಕ್ಕೆ ನೇಮಕ ಮಾಡಲಾಗಿದೆ.

ಉಪ್ಪಿನಂಗಡಿ ಘಟಕದ 22 ಜನ ಗೃಹರಕ್ಷಕ ಸಿಬ್ಬಂದಿ ಗಳು ಮಧ್ಯಪ್ರದೇಶದಲ್ಲಿ ನಡೆಯುವ ಚುನಾವಣಾ ಬಂದೋಬಸ್ತ್ ಕರ್ತವ್ಯಕ್ಕೆ ಮಾನ್ಯ DGP ರವರ ಆದೇಶದಂತೆ ಜಿಲ್ಲಾ ಕಮಾಂಡೆಂಟ್ ರಾದ ಡಾ. ಮುರಳಿ ಮೋಹನ್ ಚೂಂತಾರು ರವರ ಮಾರ್ಗದರ್ಶನದಲ್ಲಿ ದಿನಾಂಕ 19-11-18ರಂದು ಬೆಂಗಳೂರಿನಿಂದ ಮದ್ಯಪ್ರದೇಶ ಸರಕಾರದ ಚುನಾವಣಾ ಆಯೋಗದ ವಿಶೇಷ ರೈಲಿನಲ್ಲಿ ಮದ್ಯಪ್ರದೇಶಕ್ಕೆ ಚುನಾವಣಾ ಕರ್ತವ್ಯಕ್ಕೆ ತೆರಳಿದ್ದಾರೆ.

ದ.ಕ ಜಿಲ್ಲೆಯಿಂದ ಸುಮಾರು 250ಗೃಹರಕ್ಷಕರು ರಾಜ್ಯದಿಂದ ಒಟ್ಟು3000 ಗೃಹರಕ್ಷಕರು ಮಧ್ಯಪ್ರದೇಶ ಚುನಾವಣಾ ಕರ್ತವ್ಯಕ್ಕೆ ತೆರಳಿದ್ದಾರೆ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಿಂದ ನೊಡಲ್ ಅಧಿಕಾರಿಯಾಗಿ ಜಿಲ್ಲೆಯ ರಾಷ್ಷ ಪತಿಗಳ ಪುರಸ್ಕಾರ ಪಡೆದ ಡೆಪ್ಯುಟಿ ಕಮಾಡೆಂಟ್ ರಮೇಶ್ ಇವರನ್ನು ನೇಮಕ ಮಾಡಲಾಗಿದೆ.

6 Shares

Facebook Comments

comments