Connect with us

    DAKSHINA KANNADA

    ಉತ್ತರಪ್ರದೇಶ ಸರಕಾರ ಅತ್ಯಾಚಾರವೆಸಗಿದ ನಿರಪರಾಧಿಗಳನ್ನು ಬಂಧಿಸದೆ ಅನ್ಯಾಯ ಮಾಡಿದೆ, ಬಾಯಿತಪ್ಪಿ ಎಡವಟ್ಟು ಮಾಡಿದ ಮಿಥುನ್ ರೈ………..

    ಉತ್ತರಪ್ರದೇಶ ಸರಕಾರ ಅತ್ಯಾಚಾರವೆಸಗಿದ ನಿರಪರಾಧಿಗಳನ್ನು ಬಂಧಿಸದೆ ಅನ್ಯಾಯ ಮಾಡಿದೆ, ಬಾಯಿತಪ್ಪಿ ಎಡವಟ್ಟು ಮಾಡಿದ ಮಿಥುನ್ ರೈ………..

    ಪುತ್ತೂರು, ಅಕ್ಟೋಬರ್ 12: ಉತ್ತರಪ್ರದೇಶದ ಹತ್ರಾಸ್ ನಲ್ಲಿ ದಲಿತ ಯುವತಿಯ ಮೇಲೆ ನಡೆದ ಅತ್ಯಾಚಾರವನ್ನು ಖಂಡಿಸಿ ಕಾಂಗ್ರೇಸ್ ದಲಿತ ಘಟಕದಿಂದ ಪುತ್ತೂರಿನಲ್ಲಿ ಪ್ರತಿಭಟನೆ ನಡೆಯಿತು.

    ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಯೂತ್ ಕಾಂಗ್ರೇಸ್ ಅಧ್ಯಕ್ಷ ಮಿಥುನ್ ರೈ ಮಾತಿನ ಭರದಲ್ಲಿ ಎಡವಟ್ಟು ಮಾಡಿಕೊಂಡಿದ್ದಾರೆ.

    ಉತ್ತರಪ್ರದೇಶ ಸರಕಾರ ದಲಿತ ಯುವತಿಗೆ ಅತ್ಯಾಚಾರ ನಡೆಸಿದ ನಿರಪರಾಧಿಗಳನ್ನು ಬಂಧಿಸದೆ ಯುವತಿಯ ಕುಟುಂಬದ ಮೇಲೆ ಅನ್ಯಾಯ ಮಾಡಿದೆ ಎಂದಿದ್ದಾರೆ.

    ಉತ್ತರಪ್ರದೇಶ ಸರಕಾರ ಸಾವನ್ನಪ್ಪಿದ ಯುವತಿಯ ಅಂತಿಮ ಸಂಸ್ಕಾರ ನೆರವೇರಿಸಲೂ ಕುಟುಂಬಕ್ಕೆ ಬಿಟ್ಟಿಲ್ಲ ಎಂದು ಆರೋಪಿಸಿದ ಅವರು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ನೀಡಿದ ಹೇಳಿಕೆಯನ್ನು ಬಿಜೆಪಿ ತಿರುಚುವ ಪ್ರಯತ್ನ ನಡೆಸುತ್ತಿದೆ.

    ಜೋಗಿ ಸಮಾಜದ ವಿರುದ್ಧ ಯಾವುದಾದರೂ ಹೇಳಿಕೆ ನೀಡಿದ್ದರೆ, ತಾನು ಯಾವುದೇ ಶಿಕ್ಷೆಗೂ ಸಿದ್ಧ ಎಂದಿದ್ದಾರೆ.

    ಕೇಸರಿ ಬಟ್ಟೆ ತ್ಯಾಗ, ಬಲಿದಾನದ ಪ್ರತೀಕವಾಗಿದ್ದು, ರಾಜಕೀಯ ಪ್ರವೇಶಿಸಿದ ಬಳಿಕ ಆ ಕೇಸರಿಗೆ ಯಾವುದೇ ಮಾನ್ಯತೆಯಿಲ್ಲ ಎಂದು ಅವರು ಇದೇ ಸಂದರ್ಭದಲ್ಲಿ ಯೋಗಿ ಆದಿತ್ಯನಾಥ್ ವಿರುದ್ಧ ಮತ್ತೆ ತಿರುಗಿಬಿದ್ದಿದ್ದಾರೆ.

    ಪುತ್ತೂರು ಮಿನಿ ವಿಧಾನ ಸೌಧದ ಮುಂಭಾಗದಲ್ಲಿ ನಡೆದ ಈ ಪ್ರತಿಭಟನೆಯನ್ನು ಕಾಂಗ್ರೇಸ್ ಕಾರ್ಯಕರ್ತರು ಸೇರಿದಂತೆ ಹಲವು ಜಿಲ್ಲಾ ಮುಖಂಡರೂ ಪಾಲ್ಗೊಂಡಿದ್ದರು.

    Share Information
    Advertisement
    Click to comment

    Leave a Reply

    Your email address will not be published. Required fields are marked *