Connect with us

LATEST NEWS

ಮೂಡುಬಿದಿರೆ ನಿವಾಸಿ ನೇಣು ಬಿಗಿದು ಆತ್ಮಹತ್ಯೆ

ಮೂಡುಬಿದಿರೆ, ಅಕ್ಟೋಬರ್ 12: ಮೂಡುಬಿದಿರೆ ಮುಖ್ಯರಸ್ತೆ ಬಳಿಯ ನಿವಾಸಿ ಯುವಕನೊಬ್ಬ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಮೂಡುಬಿದಿರೆ ನಿವಾಸಿ ರಾಘು ಪೈ ಯಾನೆ ರಾಘವೇಂದ್ರ ಪೈ (32) ಆತ್ಮಹತ್ಯೆ ಮಾಡಿಕೊಂಡ ಯುವಕ. ಹಲವು ವರ್ಷದಿಂದ ಆಟೋ ಚಾಲಕನಾಗಿ ದುಡಿಯುತ್ತಿದ್ದ ಈತ ಕೆಲವು ತಿಂಗಳಿಂದ ಆಟೋ ರಿಕ್ಷಾ ಮಾರಿ, ಇತರ ವಾಹನಗಳಲ್ಲಿ ಚಾಲಕನಾಗಿ ದುಡಿಯುತ್ತಿದ್ದ. ಭಾನುವಾರ ರಾತ್ರಿ ಈತ ಮನೆಗೆ ಬಾರದಿರುವುದನ್ನು ಕಂಡು ತಾಯಿ, ಆತನ ಬಳಿ ವಿಚಾರಿಸಿದ್ದಾರೆ. ಸೊಮವಾರ ಬೆಳಗ್ಗೆ ಮನೆ ಸಮೀಪವಿದ್ದ ಬಾವಿ ಬಳಿ ನೋಡುವಾಗ ಆತ, ತಾಯಿಯ ಸೀರೆಯಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.

Facebook Comments

comments