BANTWAL
ಕಾಂಗ್ರೆಸ್ ನ ಭ್ರಷ್ಟಾಚಾರದ ಲಂಕೆಯನ್ನು ಉರಿಸಬೇಕು – ಯೋಗಿ ಆದಿತ್ಯನಾಥ್

ಕಾಂಗ್ರೆಸ್ ನ ಭ್ರಷ್ಟಾಚಾರದ ಲಂಕೆಯನ್ನು ಉರಿಸಬೇಕು – ಯೋಗಿ ಆದಿತ್ಯನಾಥ್
ಮಂಗಳೂರು ಮೇ 10: ಕಲ್ಲಡ್ಕದ ಶಾಲಾ ಮಕ್ಕಳ ಅನ್ನ ಕಸಿದ ಕಾಂಗ್ರೆಸ್ ಸರಕಾರ ವನ್ನು ಕಿತ್ತೋಗೆದು ಕಾಂಗ್ರೇಸ್ ಗೆ ತಕ್ಕ ಪಾಠ ಕಲಿಸಿ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕರೆನೀಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಚುನಾವಣಾ ಪ್ರಚಾರ ಸಂದರ್ಭದಲ್ಲಿ ಅವರು ರಾಜ್ಯ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಬಂಟ್ವಾಳ ವಿಧಾನ ಸಭಾ ಕ್ಷೆತ್ರದಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರೋಡ್ ಶೋ ನಡೆಸಿದರು. ರಾಜ್ಯದ ಗಮನ ಸೆಳೆದಿರುವ ವಿಧಾನಸಭಾ ಕ್ಷೇತ್ರವಾಗಿರುವ ಬಂಟ್ವಾಳದಲ್ಲಿ ರಮಾನಾಥ ರೈ ಎದುರು ಬಿಜೆಪಿ ಇಂದು ತನ್ನ ಶಕ್ತಿ ಪ್ರದರ್ಶನ ಮಾಡಿದೆ.

ಬಂಟ್ವಾಳದ ಕೈಕಂಬ ದಿಂದ ಬಿಸಿರೋಡ್ ವರೆಗೆ ರೋಡ್ ಶೋ ನಡೆಸಿದ ಯೋಗಿ ಆದಿತ್ಯನಾಥ್ ಬಿ ಸಿ ರೋಡ್ ನಲ್ಲಿ ಪ್ರಚಾರ ಸಭೆ ಉದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಈ ಸಲ ನಡೆಯತ್ತಿರುವ ಚುನಾವಣೆ ಮಾಫಿಯಾಗಳು ಮತ್ತು ಬಿಜೆಪಿ ನಡುವೆ ನಡೆಯುತ್ತಿರುವ ಹೋರಾಟ. ಬಿಜೆಪಿಯ ಯುವಶಕ್ತಿ ಹನುಮಾನ್ ಮಾದರಿ ಶಕ್ತಿ ಹೊಂದಿದ್ದು, ರಾಜ್ಯದಲ್ಲಿ ಗೂಂಡಾ ರಾಜ್ಯವನ್ನು ತೊಲಗಿಸಲು ಯುವಶಕ್ತಿ ಭಜರಂಗಿಗಳಾಗಬೇಕು ಎಂದು ಅವರು ಹೇಳಿದರು.
ಕಲ್ಲಡ್ಕದ ಶಾಲಾ ಮಕ್ಕಳ ಅನ್ನ ಕಸಿದ ಕಾಂಗ್ರೆಸ್ ಸರಕಾರ ವನ್ನು ಕಿತ್ತೋಗೆದು ತಕ್ಕ ಪಾಠ ಕಲಿಸಿ ಎಂದು ಕೆರ ನೀಡಿದ ಅವರು ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಲ್ಲಿ ಮಕ್ಕಳ ಅನ್ನ ದಾಸೋಹ ಮತ್ತೆ ಮುಂದುವರಿಸಲಿದೆ ಎಂದು ಅವರು ಹೇಳಿದರು.
ಕಾಂಗ್ರೆಸ್ ನ ಭ್ರಷ್ಟಾಚಾರದ ಲಂಕೆಯನ್ನು ಉರಿಸಬೇಕು.ಕಾಂಗ್ರೆಸ್ ನ ಅರಾಜಕತೆಯನ್ನು ನಿಲ್ಲಿಸುವ ತಾಕತ್ ಕೇವಲ ಬಿಜೆಪಿಗಿದ್ದು ಕರ್ನಾಟಕದಲ್ಲಿ ರಾಮರಾಜ್ಯ ಸ್ಥಾಪನೆ ಅವಶ್ಯಕತೆಯಿದೆ ಎಂದು ಅವರು ಹೇಳಿದರು.