LATEST NEWS
ರಾಮಮಂದಿರಕ್ಕಾಗಿ ಪ್ರಾಣ ತ್ಯಾಗ ಮಾಡಿದವರಿಗೆ ಅಯೋಧ್ಯೆಯಲ್ಲಿ ಸ್ಮಾರಕ : ಯೋಗಿ ಆದಿತ್ಯನಾಥ್ ಘೋಷಣೆ

ಅಯೋಧ್ಯಾ : ರಾಮಮಂದಿರಕ್ಕಾಗಿ ಪ್ರಾಣ ತ್ಯಾಗ ಮಾಡಿದವರಿಗಾಗಿ ಅಯೋಧ್ಯೆಯಲ್ಲಿ ಸ್ಮಾರಕವನ್ನು ನಿರ್ಮಿಸುವುದಾಗಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಘೋಷಣೆ ಮಾಡಿದ್ದಾರೆ.
ಅಯೋಧ್ಯೆಯಲ್ಲಿ ಭವ್ಯವಾದ ರಾಮ ಮಂದಿರ ನಿರ್ಮಾಣದ ಕಾರ್ಯ ಅಂತಿಮ ಹಂತದಲ್ಲಿದ್ದು ಅದನ್ನು ಪರೀಶೀಲಿಸಿದ ಸಿಎಂ ಯೋಗಿ ಆದಿತ್ಯನಾಥ್ ಈ ಘೋಷಣೆ ಮಾಡಿದ್ದಾರೆ. 1990 ರಲ್ಲಿ 2 ದಿನಗಳ ಕ್ರೂರ ಪೊಲೀಸರ ಗುಂಡಿನ ದಾಳಿಯಲ್ಲಿ ಅನೇಕ ಕರಸೇವಕರು ಪ್ರಾಣ ತ್ಯಾಗ ಮಾಡಿದ್ದಾರೆ.


ಕೊಠಾರಿ ಸಹೋದರರು
ಅದೇ ರೀತಿ ರಾಮಮಂದಿರಕ್ಕಾಗಿ ಪ್ರಾಣ ತ್ಯಾಗ ಮಾಡಿದ ಕೊಠಾರಿ ಸಹೋದರರು ಸೇರಿದಂತೆ ರಾಮ ಮಂದಿರದ ಹೋರಾಟದಲ್ಲಿ ಬಲಿದಾನ ಗೈದರೆಲ್ಲರೂ ರಾಮ ಭಕ್ತರಾಗಿದ್ದಾರೆ. ಅವರನ್ನು ಗೌರವ ಪೂರ್ವಕವಾಗಿ ಸ್ಮರಿಸಲಾಗುವುದು ಮತ್ತು ಅವರ ಭಕ್ತಿಯನ್ನು ಸ್ಮರಿಸಲು ಅಯೋಧ್ಯೆಯಲ್ಲಿ ಸ್ಮಾರಕವನ್ನು ನಿರ್ಮಿಸಲಾಗುವುದು. ಈ ಸ್ಮಾರಕದ ಮೇಲೆ ಅವರ ಹೆಸರನ್ನು ಮೇಲೆ ಕೆತ್ತಲಾಗುವುದು ಎಂದು ಹೇಳಿದರು. .