LATEST NEWS
ವಿಡಿಯೋ – ಕುಡಿದ ಮತ್ತಿನಲ್ಲಿ ನಡುರಸ್ತೆಯಲ್ಲಿ ಯುವತಿಯೊಬ್ಬಳ ಮೇಲೆ ನಾಲ್ವರು ಯುವತಿಯರಿಂದ ಹಲ್ಲೆ

ಇಂದೋರ್ : ಕುಡಿದ ಮತ್ತಿನಲ್ಲಿದ್ದ ಹುಡುಗಿಯರ ಗುಂಪು ಮತ್ತೊಬ್ಬ ಹುಡುಗಿಯನ್ನು ರಸ್ತೆಯಲ್ಲಿ ಥಳಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮಧ್ಯಪ್ರದೇಶದ ಇಂದೋರ್‌ನಲ್ಲಿ ಈ ಘಟನೆ ನಡೆದಿದೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ನವೆಂಬರ್ 4 ರಂದು ಬೆಳಗಿನ ಜಾವ 1 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ಘಟನೆಯ ವಿಡಿಯೋ ಸೋಮವಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವೈರಲ್ ಆಗಿರುವ ವಿಡಿಯೋದಲ್ಲಿ ನಾಲ್ವರು ಹುಡುಗಿಯರು ಮಹಿಳೆಯನ್ನು ಥಳಿಸಿ ದೌರ್ಜನ್ಯ ಎಸಗುತ್ತಿರುವುದು ಕಂಡುಬಂದಿದೆ.

ಯಾವುದೇ ಕಾರಣವಿಲ್ಲದೆ ಮೇಘಾ ಮಾಳವಿಯಾ, ಟೀನಾ ಸೋನಿ, ಪೂನಂ ಅಹಿರ್ವಾರ್ ಮತ್ತು ಮತ್ತೊಬ್ಬರು ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಸಂತ್ರಸ್ತೆ ದೂರು ನೀಡಿದ್ದಾರೆ ಎಂದು ಎಂಐಜಿ ಪೊಲೀಸ್ ಠಾಣೆ ಉಸ್ತುವಾರಿ ಅಜಯ್ ವರ್ಮಾ ಹೇಳಿದ್ದಾರೆ.
ಸಂತ್ರಸ್ತೆ ಜಿಲ್ಲೆಯ ಧೇನು ಮಾರುಕಟ್ಟೆಯಲ್ಲಿ ಕೀಟನಾಶಕ ಅಂಗಡಿಯಲ್ಲಿ ಸೇಲ್ಸ್‌ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದಾರೆ.
VIDEO