Connect with us

    LATEST NEWS

    ಹಿಜಬ್ ಸುಟ್ಟು ಕೇರಳದ ಮುಸ್ಲಿಂ ಮಹಿಳೆಯರ ಪ್ರತಿಭಟನೆ…!?

    ತಿರುವನಂತಪುರಂ, ನವೆಂಬರ್ 08: ಇರಾನ್‌ನಲ್ಲಿ ನಡೆಯುತ್ತಿರುವ ಹಿಜಾಬ್ ಪ್ರತಿಭಟನೆಗೆ ಕೇರಳದ ಮುಸ್ಲಿಂ ಮಹಿಳೆಯರು ಕೈಜೋಡಿಸಿದ್ದಾರೆ. ಕೇರಳ ಯುಕ್ತಿವಾದಿ ಸಂಗಮ ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಮುಸ್ಲಿಂ ಮಹಿಳೆಯರು ಹಿಜಬ್ ಸುಟ್ಟು ಪ್ರತಿಭಟನೆ ನಡೆಸಿದ್ದಾರೆ. ಇದು ಭಾರತದಲ್ಲಿ ಹಿಜಬ್ ಸುಟ್ಟಿರುವ ಮೊದಲ ಘಟನೆಯಾಗಿದೆ.

    ಕೋಝಿಕೋಡ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಇರಾನ್‌ನಲ್ಲಿ ನಡೆಯುತ್ತಿರುವ ಹಿಜಬ್ ವಿರೋಧಿ ಚಳವಳಿಗೆ ಒಗ್ಗಟ್ಟಿನಿಂದ ಮುಸ್ಲಿಂ ಮಹಿಳೆಯರು ಹಿಜಬ್ ಅನ್ನು ಸುಟ್ಟು ಹಾಕಿದ್ದಾರೆ. ಸಂಘಟನೆಯ 6 ಮುಸ್ಲಿಂ ಮಹಿಳೆಯರು ಹಿಜಬ್ ಸುಡುವ ಕ್ರಮದ ನೇತೃತ್ವವಹಿಸಿದ್ದರು. ಇದು ಆನೆಗಳ ಪ್ರಪಂಚ l The World of Elephants

    ಯುಕ್ತಿವಾದಿ ಸಂಗಮ ರಾಷ್ಟ್ರೀಯ ಸಂಸ್ಥೆಯಾಗಿದ್ದು, ಮುಕ್ತ ಚಿಂತನೆ ವಿಷಯದ ಕುರಿತು ಪ್ರತಿ ವರ್ಷ ಇಂತಹ ವಿಚಾರ ಸಂಕಿರಣಗಳನ್ನು ಆಯೋಜಿಸುತ್ತದೆ. ಈ ಬಾರಿ ಸಂಘಟನೆಯ ಭಾಗವಾಗಿರುವ ಮುಸ್ಲಿಂ ಮಹಿಳೆಯರು ಸೇರಿದಂತೆ ನಾನಾ ಧರ್ಮದ ಜನರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಇರಾನ್‌ನಲ್ಲಿ ನಡೆದ ಘಟನೆಗಳಿಂದ ಪ್ರೇರಿತರಾಗಿ ಮುಸ್ಲಿಂ ಮಹಿಳೆಯರು ಹಿಜಬ್ ಸುಟ್ಟು ಪ್ರತಿಭಟಿಸಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply