LATEST NEWS
ಮುಟ್ಟಿನ ಸಮಯದಲ್ಲಿ ವೇತನ ಸಹಿತ ರಜೆಗೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ವಿರೋಧ
ನವದೆಹಲಿ ಡಿಸೆಂಬರ್ 14: ಮಹಿಳೆಯರಿಗೆ ಮುಟ್ಟಿನ ಸಂದರ್ಭ ವೇತನ ಸಹಿತ ರಜೆ ನೀಡಬೇಕು ಎಂಬ ಕಾಂಗ್ರೇಸ್ ಸಂಸದ ಶಶಿ ತರೂರ್ ಪ್ರಶ್ನೆಗೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು ಮುಟ್ಟು ಎಂಬುದು ಅಂಗವೈಕಲ್ಯವಲ್ಲ ಮಹಿಳೆಯರಿಗೆ ವೇತನ ಸಹಿತ ರಜೆಯ ಅಗತ್ಯವಿಲ್ಲ ತಿಳಿಸಿದ್ದಾರೆ.
ಕಾಂಗ್ರೆಸ್ ಸಂಸದ ಶಶಿ ತರೂರ್ ಪ್ರಶ್ನೆಗೆ ಉತ್ತರಿಸಿದ ಇರಾನಿ, ಎಲ್ಲಾ ಕೆಲಸದ ಸ್ಥಳಗಳಲ್ಲಿ ವೇತನ ಸಹಿತ ಮುಟ್ಟಿನ ರಜೆಯನ್ನು ಕಡ್ಡಾಯಗೊಳಿಸುವ ಯಾವುದೇ ಪ್ರಸ್ತಾವನೆಯೂ ಸರ್ಕಾರದ ಪರಿಗಣನೆಯಲ್ಲಿಲ್ಲ ಎಂದಿದ್ದಾರೆ. ಋತುಚಕ್ರವು ಮಹಿಳೆಯರ ಕೆಲಸಕ್ಕೆ ಎಂದೂ ಅಡ್ಡಿಯಾಗುವುದಿಲ್ಲ, ಅದು ಅಂಗವೈಕಲ್ಯವಲ್ಲ, ಇದು ಮಹಿಳೆಯರ ಜೀವನದ ಒಂದು ಭಾಗ ಹಾಗೂ ಸಹಜ ಪ್ರಕ್ರಿಯೆ ಎಂದು ಹೇಳಿದರು.
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಮುಟ್ಟಿನ ನೈರ್ಮಲ್ಯದ ಕರಡು ನೀತಿಯನ್ನು ಸಿದ್ಧಪಡಿಸಿದೆ ಎಂದರು. 10-19 ವಯೋಮಾನದ ಬಾಲಕಿಯರಲ್ಲಿ ಮುಟ್ಟಿನ ನೈರ್ಮಲ್ಯವನ್ನು ಉತ್ತೇಜಿಸಲು ಕೇಂದ್ರವು ಈಗಾಗಲೇ ಯೋಜನೆಯನ್ನು ಜಾರಿಗೊಳಿಸುತ್ತಿದೆ ಎಂದು ಅವರು ಸದನಕ್ಕೆ ತಿಳಿಸಿದರು.