Connect with us

    DAKSHINA KANNADA

    ಉಳ್ಳಾಲ: ನಿವೃತ್ತ ಯೋಧನಿಂದ ಮಹಿಳಾ ಪೇದೆಗೆ ಕಿರುಕುಳ..!

    ಉಳ್ಳಾಲ, ಆಗಸ್ಟ್ 01: ಮಹಿಳಾ ಪೊಲೀಸ್ ಕಾನ್‌ಸ್ಟೇಬಲ್‌ ಒಬ್ಬರಿಗೆ ನಿವೃತ್ತ ಯೋಧನೋರ್ವ ಲೈಂಗಿಕ ಕಿರುಕುಳ ನೀಡಿರುವ ಘಟನೆ ಉಳ್ಳಾಲ ತಾಲೂಕಿನ ಕುಂಪಲದ ಬಗಂಬಿಲ ಎಂಬಲ್ಲಿ ಆ.1ರಂದು ನಡೆದಿದೆ.

    ಕೊಲ್ಯ ಕನೀರುತೋಟ ನಿವಾಸಿ, ಸದ್ಯ ಕುಂಪಲ ಅಮೃತನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುವ ಪ್ರಶಾಂತ್ (45)  ಕಿರುಕುಳ ನೀಡಿದ ವ್ಯಕ್ತಿ ಎಂದು ಗುರುತಿಸಲಾಗಿದೆ.

    ಠಾಣೆಯೊಂದರ ಮಹಿಳಾ ಕಾನ್‌ಸ್ಟೇಬಲ್‌ ಸ್ಕೂಟರಿನಲ್ಲಿ ಕರ್ತವ್ಯಕ್ಕೆ ತೆರಳುತ್ತಿದ್ದ ಸಂದರ್ಭ ಅಡ್ಡಗಟ್ಟಿದ ನಿವೃತ್ತ ಯೋಧ ಪ್ರಶಾಂತ್, ಆಕೆಯ ಮೈಮೇಲೆ ಕೈ ಹಾಕಿ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಲಾಗಿದೆ. ತತ್‌ಕ್ಷಣ ಆಕೆ ಕಿರುಚಾಡಿದಾಗ ಸ್ಥಳೀಯರು ಜಮಾಯಿಸಿ ನಿವೃತ್ತ ಯೋಧನನ್ನು ಹಿಡಿದು ಉಳ್ಳಾಲ ಪೊಲೀಸರಿಗೆ ಒಪ್ಪಿಸಿದ್ದಾರೆ.

    ಯೋಧನ ವಿರುದ್ಧ ಹಲವು ಪ್ರಕರಣಗಳು: ಉಳ್ಳಾಲ ಪೊಲೀಸ್ ಠಾಣೆಯಲ್ಲಿ ನಿವೃತ್ತ ಯೋಧ ಪ್ರಶಾಂತ್ ವಿರುದ್ಧ ಈ ಹಿಂದೆ ಹಲವು ಮಂದಿ ವಿವಿಧ ದೂರುಗಳನ್ನು ನೀಡಿದ್ದು, ಪ್ರಕರಣಗಳು ವಿಚಾರಣೆಯ ಹಂತದಲ್ಲಿವೆ. ನಿತ್ಯ ಮದ್ಯಪಾನ ಮಾಡಿ ಬಂದು ನೆರೆಮನೆಯವರಿಗೆ ಮತ್ತು ಊರಿನವರಿಗೆ ಕಿರುಕುಳ ನೀಡುವ ಈತನ ವಿರುದ್ಧ ಹಲವಾರು ಜನರು ನೊಂದು ಪ್ರಕರಣ ದಾಖಲಿಸಿದ್ದಾರೆ.

    ಆದರೆ ಈವರೆಗೂ ಆತನ ವಿರುದ್ಧ ಯಾವುದೇ ಕ್ರಮ ಆಗಿಲ್ಲ ಹಾಗೂ ಆತನ ಉಪಟಳ ಮುಂದುವರಿದಿದೆ. ಪೊಲೀಸರ ಮೇಲೆ ಹಲ್ಲೆ ನಡೆಸಿರುವ ಬಗ್ಗೆ ಆತನ ವಿರುದ್ಧ ದೆಹಲಿ ಯೋಧರ ಅಸೋಸಿಯೇಷನ್ ನಲ್ಲಿಯೂ ಎರಡು ದೂರುಗಳು ವಿಚಾರಣಾ ಹಂತದಲ್ಲಿವೆ ಎಂದು ತಿಳಿದು ಬಂದಿದೆ.

    Share Information
    Advertisement
    Click to comment

    You must be logged in to post a comment Login

    Leave a Reply