LATEST NEWS
ಉಳ್ಳಾಲ – ಹಣ್ಣು ಹಂಪಲು ಸಾಗಿಸುತ್ತಿದ್ದ ಟೆಂಪೋ ಪಲ್ಟಿ
ಉಳ್ಳಾಲ ಅಕ್ಟೋಬರ್ 30 : ಬ್ರೇಕ್ ವೈಫಲ್ಯದಿಂದಾಗಿ ಹಣ್ಣು ಹಂಪಲು ಕೊಂಡೊಯ್ಯುತ್ತಿದ್ದ ಟೆಂಪೋ ಪಲ್ಟಿಯಾದ ಘಟನೆ ಮುಡಿಪು ಮಿತ್ತಕೋಡಿಯಲ್ಲಿ ನಡೆದಿದೆ.
ಟೆಂಪೊದಲ್ಲಿ ಕಲ್ಲಾಪು ಗ್ಲೋಬಲ್ ಮಾರುಕಟ್ಟೆಯಿಂದ ಮೆಲ್ಕಾರ್ ಕಡೆಗೆ ಹಣ್ಣುಹಂಪಲು ಸಾಗಿಸಲಾಗುತ್ತಿತ್ತು. ಬ್ರೇಕ್ ವೈಫಲ್ಯಕ್ಕೀಡಾದ ವಾಹನ ಚಾಲಕನ ನಿಯಂತ್ರಣ ತಪ್ಪಿ ಐದು ಅಡಿ ಆಳದ ಕಂದಕಕ್ಕೆ ಉರುಳಿಬಿದ್ದಿದೆ. ಟೆಂಪೊ ಚಾಲಕನಿಗೆ ಗಾಯಗಳಾಗಿವೆ. ರಸ್ತೆಯಿಡೀ ಹಣ್ಣುಹಂಪಲುಗಳು ಚೆಲ್ಲಿದೆ. ಮಂಗಳೂರು ದಕ್ಷಿಣ ಸಂಚಾರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
You must be logged in to post a comment Login