Connect with us

  LATEST NEWS

  ಉಳ್ಳಾಲ – ಸಮುದ್ರ ಪಾಲಾಗುತ್ತಿದ್ದವನ ರಕ್ಷಣೆ ಮಾಡಿದ ಶಿವಾಜಿ ಜೀವರಕ್ಷಕ ದಳ’ದ ಸದಸ್ಯರು

  ಉಳ್ಳಾಲ ಜೂನ್ 30 :ಉಳ್ಳಾಲದಲ್ಲಿ ಸಮುದ್ರದಲ್ಲಿ ಆಡಲು ಹೋಗಿ ಸಮುದ್ರಪಾಲಾಗುತ್ತಿದ್ದ ಯುವಕನನ್ನು ಸ್ಥಳೀಯ ‘ಶಿವಾಜಿ ಜೀವರಕ್ಷಕ ದಳ’ದ ಸದಸ್ಯರು ರಕ್ಷಿಸಿದ ಘಟನೆ ನಡೆದಿದೆ.


  ಬೆಂಗಳೂರಿನ ಯಶವಂತಪುರ ನಿವಾಸಿ ನಿಝಾಮ್ (35) ರಕ್ಷಣೆ ಗೊಳಗಾದವರು ಎಂದು ತಿಳಿದು ಬಂದಿದೆ. ಮೊಗವೀರಪಟ್ಣದ ಶಿವಾಜಿ ಜೀವರಕ್ಷಕ ದಳದ ವಿಕ್ರಮ್ ಪುತ್ರನ್, ಶ್ರವಣ್, ದೀಕ್ಷಿತ್ ಬಂಗೇರ, ದೀಕ್ಷಿತ್ ಚಂದನ್, ನಿಶಾಂತ್, ರಕ್ಷಿತ್ ಬಂಗೇರ, ರವಿ ಕಾಂಚನ್ ಸೇರಿ ನಿಝಾಮ್ ನನ್ನು ರಕ್ಷಿಸಿದ್ದಾರೆ. ಗುರುವಾರ ಬೆಂಗಳೂರಿನಿಂದ ಮೂವರು ಸ್ನೇಹಿತರು ಉಳ್ಳಾಲ ಬೀಚ್ ನಲ್ಲಿ ಸಮುದ್ರ ವಿಹಾರಕ್ಕೆಂದು ಬಂದಿದ್ದರು. ಸಮುದ್ರದಲ್ಲಿ ಅಲೆಗಳ ರಭಸ ಹೆಚ್ಚಿದ್ದು, ಸಮುದ್ರ ತೀರದಲ್ಲಿ ನೀರಾಟವಾಡುತ್ತಿದ್ದ ಮೂವರ ಪೈಕಿ ನಿಝಾಮ್ ಅಲೆಗಳ ನಡುವೆ ಸಿಲುಕಿ ಸಮುದ್ರಪಾಲಾಗಿದ್ದ ಎನ್ನಲಾಗಿದೆ. ತಕ್ಷಣ ಸ್ಥಳದಲ್ಲಿದ್ದ ಶಿವಾಜಿ ಜೀವರಕ್ಷಕ ತಂಡದ ಸದಸ್ಯರು ಗಮನಿಸಿ ನಿಝಾಂನನ್ನು ರಕ್ಷಿಸಿದ್ದಾರೆನ್ನಲಾಗಿದೆ. ಈ ಸಂಬಂಧ ಉಳ್ಳಾಲ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

  Share Information
  Advertisement
  Click to comment

  You must be logged in to post a comment Login

  Leave a Reply