Connect with us

    LATEST NEWS

    ಉಳ್ಳಾಲ ; ಆವರಣ ಗೋಡೆ ಕುಸಿದು ಉಕ್ಕಿ ಹರಿದ ಕಾಲುವೆ, ಹಲವು ಮನೆಗಳಿಗೆ ನೀರು

    ಮಂಗಳೂರು, ಆ.9 : ಸತತವಾಗಿ ಸುರಿಯುತ್ತಿರುವ ಕುಂಭದ್ರೋಣ ಮಳೆ ಕರಾವಳಿಯಲ್ಲಿ ಅನಾಹುತಕ್ಕೆ ಕಾರಣವಾಗುತ್ತಿದೆ. ಉಳ್ಳಾಲ ನಗರ ವ್ಯಾಪ್ತಿಯ ಬಂಗೇರ ಲೇನ್ ನಲ್ಲಿ ಆವರಣ ಗೋಡೆ ಕುಸಿದು ಕಾಲುವೆಗೆ ಬಿದ್ದ ಪರಿಣಾಮ ಕಾಲುವೆ ಉಕ್ಕಿ ಹರಿದು ಅನೇಕ ಮನೆಗಳಿಗೆ ಮಳೆ ನೀರು ನುಗ್ಗಿ ಕೃತಕ ನೆರೆ ಉಂಟಾಗಿದೆ.

    ಭಾರೀ ಮಳೆಗೆ ಕಾಲುವೆಯ ಅಂಚಿನಲ್ಲಿರುವ ಅನೂಪ್ ಎಂಬವರ ಮನೆಯ ಆವರಣ ಗೋಡೆ ಕುಸಿದಿದ್ದು ಮನೆಯೂ ಅಪಾಯದಂಚಿನಲ್ಲಿದೆ. ಕಾಲುವೆಗೆ ಆವರಣ ಗೋಡೆ ಕುಸಿದು ಬಿದ್ದ ಪರಿಣಾಮ ನೀರು ಉಕ್ಕಿ ಹರಿದಿದೆ.

    ಅಕ್ಕಪಕ್ಕದ ಮನೆಗಳಿಗೆ ನೀರು ನುಗ್ಗಿದ್ದು ಸ್ಥಳೀಯರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಉಳ್ಳಾಲ ನಗರಸಭಾ ಪೌರಾಯುಕ್ತ ರಾಯಪ್ಪ ಮತ್ತು ಸ್ಥಳೀಯ ಕೌನ್ಸಿಲರ್ ನಮಿತಾ ಗಟ್ಟಿ ಸ್ಥಳದಲ್ಲಿದ್ದು ಜೆಸಿಬಿ ಯಂತ್ರದ ಮೂಲಕ ಕಾಲುವೆಯಲ್ಲಿ ಬಿದ್ದಿರುವ ಕಲ್ಲುಗಳ ತೆರವು ಕಾರ್ಯಾಚರಣೆ ನಡೆಸುತ್ತಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply