MANGALORE
ಉಳ್ಳಾಲ ದರ್ಗಾ ಆಡಳಿತ ಸಮಿತಿ ವಿರುದ್ದ ಪ್ರತಿಭಟನೆ
ಉಳ್ಳಾಲ ದರ್ಗಾ ಆಡಳಿತ ಸಮಿತಿ ವಿರುದ್ದ ಪ್ರತಿಭಟನೆ
ಮಂಗಳೂರು ಎಪ್ರಿಲ್ 6 :ಉಳ್ಳಾಲ ಸೈಯದ್ ಮದನಿ ದರ್ಗಾ ಮತ್ತು ಕೇಂದ್ರ ಜುಮಾ ಮಸೀದಿಯ ಹಾಲಿ ಆಡಳಿತ ಸಮಿತಿಯ ವಿರುದ್ದ ಸೈಯದ್ ಮದನಿ ಮೊಹಲ್ಲಾ ಒಕ್ಕೂಟ ಉಳ್ಳಾಲ ಇವರ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಉಳ್ಳಾಲ ದರ್ಗಾದ ಆಡಳಿತ ಮಂಡಳಿ ರಾಜ್ಯ ವಕ್ಪ್ ಮಂಡಳಿ ರೂಪಿಸಿದ ನಿಯಮಾವಳಿಗಳನ್ನು ಉಲ್ಲಂಘಿಸಿದ್ದು, ರಾಜ್ಯ ಸರಕಾರ ಮದ್ರಸ ಸಿಲೆಬಸ್ ಗೆ ಸಂಬಂಧಿಸಿದಂತೆ ಹೊರಡಿಸಿದ ಸುತ್ತೋಲೆ ಮತ್ತು ಅದಕ್ಕೆ ಸಂಬಂಧಿಸಿದ ಉಚ್ಚ ನ್ಯಾಯಾಲಯದ ಆದೇಶಗಳನ್ನು ಕೂಡ ಆಡಳಿತ ಮಂಡಳಿ ತಿರಸ್ಕರಿಸಿದೆ ಎಂದು ಆರೋಪಿಸಿದರು.
ಉಳ್ಳಾಲ ದರ್ಗಾ ಆಡಳಿತ ಮಂಡಳಿ ವಿರುದ್ದ ಮಾತನಾಡಿದವರ ಮೇಲೆ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಉಳ್ಳಾಲದ ದರ್ಗಾದಲ್ಲಿ ಆಡಳಿತ ನಡೆಸುವವರು ಹೆದರಿಸುತ್ತಿದ್ದು, ಆ ಸವಾಲನ್ನು ನಾವು ಸ್ವೀಕರಿಸಲು ಸಿದ್ದ ಪ್ರತಿಭಟನಾಕಾರರು ತಿಳಿಸಿದರು.
You must be logged in to post a comment Login