LATEST NEWS
ಮೇ 7 ರಂದು ಎಸ್ಎಸ್ಎಲ್ ಸಿ ರಿಸಲ್ಟ್
ಮೇ 7 ರಂದು ಎಸ್ಎಸ್ಎಲ್ ಸಿ ರಿಸಲ್ಟ್
ಬೆಂಗಳೂರು ಎಪ್ರಿಲ್ 7 : ಮೇ 7 ರಂದು ಎಸ್ಎಸ್ಎಲ್ ಸಿ ಪರೀಕ್ಷೆಯ ಫಲಿತಾಂಶವನ್ನು ವೆಬ್ ಸೈಟ್ ನಲ್ಲಿ ಪ್ರಕಟಿಸಲಾಗುವುದು ಎಂದು ಪ್ರಾಥಮಿ ಮತ್ತು ಪ್ರೌಢ ಶಿಕ್ಷಣ ಇಲಾಖೆ ಸಚಿವ ತನ್ವಿರ್ ಸೇಠ್ ತಿಳಿಸಿದ್ದಾರೆ.
ಪ್ರಸಕ್ತ ವರ್ಷದ ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ರಾಜ್ಯದ ಒಟ್ಟು 8.5 ಲಕ್ಷ ವಿಧ್ಯಾರ್ಥಿಗಳು ಪರೀಕ್ಷೆ ಬರೆದಿದ್ದು , ಪರೀಕ್ಷೆಯ ಫಲಿತಾಂಶವನ್ನು ಮೇ 7 ರಂದು ಇಲಾಖೆಯ ವೆಬ್ ಸೈಟ್ ಗಳಲ್ಲಿ ಪ್ರಕಟಿಸಲಾಗುವುದು, ಮೇ 8 ರಂದು ಶಾಲೆಗಳಲ್ಲಿ ಫಲಿತಾಂಶ ಪ್ರಕಟವಾಗಲಿದೆ ಎಂದು ತಿಳಿಸಿದರು.
ಈ ಸಲ ಎಸ್ಎಸ್ಎಲ್ ಸಿಯಲ್ಲಿ 33 ವಿಷಯ ಹಾಗೂ 7 ಮಾಧ್ಯಮಗಳಲ್ಲಿ 14,385 ಪ್ರೌಢ ಶಾಲೆಗಳ 8,54,424 ವಿಧ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ರಾಜ್ಯದಾದ್ಯಂತ ಸುಮಾರು 2,817 ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿತ್ತು. ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ಕ್ಯಾಮರಾ ಕಣ್ಗಾವಲನ್ನು ಆಳವಡಿಸಲಾಗಿತ್ತು. ಅಲ್ಲದೇ ಇದೇ ಮೊದಲ ಬಾರಿ ಜಿಲ್ಲಾಡಳಿತವನ್ನು ಪರೀಕ್ಷೆ ಮೇಲ್ವಿಚಾರಣೆಗೆ ತೊಡಗಿಸಿಕೊಳ್ಳಲಾಗಿತ್ತು ಎಂದು ಸಚಿವ ತನ್ವೀರ್ ಸೇಠ್ ತಿಳಿಸಿದರು.
ಎಪ್ರಿಲ್ 16 ರಿಂದ 25 ರವರೆಗೆ ಎಸ್ಎಸ್ ಎಲ್ ಸಿ ಪರೀಕ್ಷೆಯ ಮೌಲ್ಯಮಾಪನ ನಡೆಯಲಿದ್ದು, ಮೇ 7 ರಂದು ಎಸ್ ಎಸ್ ಎಲ್ ಸಿ ಮಂಡಳಿಯಿಂದ ಫಲಿತಾಂಶದ ಪಟ್ಟಿ ಎಲ್ಲಾ ಜಿಲ್ಲಾಕೇಂದ್ರಗಳಿಗೆ ರವಾನೆಯಾಗಲಿದ್ದು ಮೇ 8 ರಂದು ಎಲ್ಲಾ ಶಾಲೆಗಳಲ್ಲಿ ಪರೀಕ್ಷೆ ಫಲಿತಾಂಶ ಪ್ರಕಟವಾಗಲಿದೆ.
You must be logged in to post a comment Login