Connect with us

    BELTHANGADI

    ಉಜಿರೆಯಲ್ಲಿ ಎಂಟು ವರ್ಷದ ಬಾಲಕನ ಅಪಹರಣ ಪ್ರಕರಣ – 17 ಕೋಟಿ ಬೇಡಿಕೆ

    ಬೆಳ್ತಂಗಡಿ ಡಿಸೆಂಬರ್ 18 : ಉಜಿರೆಯ ಬಿಜೋಯ್ ಏಜೆನ್ಸಿಸ್ ಮಾಲೀಕ, ಉದ್ಯಮಿ ಬಿಜೋಯ್ ಅವರ ಪುತ್ರ 8 ವರ್ಷದ ಅನುಭವ್ ನನ್ನ ನಿನ್ನೆ ಸಂಜೆ ಬಿಳಿ ಇಂಡಿಕಾ ಕಾರಿನಲ್ಲಿ ಮನೆಯ ಗೇಟ್ ಬಳಿಯಿಂದ ಅಪಹರಿಸಲಾಗಿದೆ. ಇದೀಗ ಅಪಹರಣಕಾರರು 17 ಕೋಟಿ‌ ರೂ. ನೀಡುವಂತೆ ಬೇಡಿಕೆಯನ್ನು ಇರಿಸಿದ್ದಾರೆ ಎಂದು ಬಾಲಕನ ಅಜ್ಜ ಎಕೆ ಶಿವನ್ ಅವರು ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.


    ಉಜಿರೆ ಜನಾರ್ಧನ ಸ್ವಾಮಿ ದೇವಸ್ಥಾನದ ರಥಬೀದಿಯ ಅಶ್ವತ್ಥ ಕಟ್ಟೆ ಸಮೀಪದ ನಿವಾಸಿ ಉದ್ಯಮಿ ಬಿಜೋಯ್ ಎಂಬವರ ಪುತ್ರ ಅನುಭವ್ (8) ನನ್ನು‌ ಡಿಸೆಂಬರ್ 17 ರಂದು ಸಂಜೆ ಬಿಳಿ ಇಂಡಿಕಾ ಕಾರಿನಲ್ಲಿ ಬಂದ 3-4 ಮಂದಿಯ ಅಪರಿಚಿತ‌ ತಂಡ ಮನೆಯ ಗೇಟ್ ಬಳಿಯಿಂದ  ಅಪಹರಣ ಮಾಡಿದ್ದು, 17 ಕೋಟಿ‌ ರೂ. ನೀಡುವಂತೆ ಬೇಡಿಕೆಯನ್ನು ಇರಿಸಿದ್ದಾರೆ ಎಂದು ಬಾಲಕನ ಅಜ್ಜ ಎ.ಕೆ. ಶಿವನ್ ಅವರು ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

    ಅಜ್ಜ ಹಾಗೂ ಮೊಮ್ಮಗ ರಥ ಬೀದಿ ಕಡೆಯಿಂದ ಮನೆಗೆ ಹೋಗುತ್ತಿದ್ದರು. ಮೊಮ್ಮಗ ಅಜ್ಜನಿಂದ ಮುಂದಿದ್ದು ಮನೆಯ ಗೇಟು ಬಳಿ ತಲುಪುತ್ತಿದ್ದಂತೆ ಅಲ್ಲಿಯೆ ನಿಂತಿದ್ದ ಬಿಳಿ ಬಣ್ಣದ ಇಂಡಿಕಾ ಕಾರಿನಿಂದ ಇಬ್ಬರು ಅಪರಿಚಿತರು ಇಳಿದು ಬಾಲಕನನ್ನು ಬಲವಂತದಿಂದ ಕಾರಿನಲ್ಲಿ ಕುಳ್ಳಿರಿಸಿದ್ದಾರೆ. ಶಿವನ್ ಓಡಿ ಬಂದು‌ ಕಾರಿನ ಬಾಗಿಲು ತೆಗೆಯಲು ಪ್ರಯತ್ನಿಸುವ ವೇಳೆಗೆ ಕಾರನ್ನು ಚಲಾಯಿಸಿಕೊಂಡು ಹೋಗಿದ್ದಾರೆ.

    ಬಳಿಕ ಶಿವನ್ ಅವರ ಸೊಸೆಗೆ ಅಪಹರಣಕಾರರು ಫೋನಾಯಿಸಿ, ಮಗನ ಬಿಡುಗಡೆಗೆ 100 ಬಿಟ್ ಕಾಯಿನ್( 17 ಕೋಟಿ ರೂ) ಬೇಡಿಕೆ ಇಟ್ಟಿದ್ದಾರೆ ಶಿವನ್ ಅವರು ದೂರಿನಲ್ಲಿ ತಿಳಿಸಿದ್ದಾರೆ. ಬೆಳ್ತಂಗಡಿ ಠಾಣೆಗೆ ಬಾಲಕನ ಅಜ್ಜ ಶಿವನ್ ದೂರು ನೀಡಿದ್ದು, ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply