Connect with us

LATEST NEWS

ಪೇಜಾವರ ಶ್ರೀ ವಿಶ್ವೇಶತೀರ್ಥ ಸ್ವಾಮಿಜಿ ಸಂಸ್ಮರಣಾ ಕಾರ್ಯಕ್ರಮ

ಉಡುಪಿ ಡಿಸೆಂಬರ್ 17 : ಪೇಜಾವರ ಮಠದ ಯತಿಗಳಾಗಿದ್ದ ವಿಶ್ವೇಶತೀರ್ಥ ಶ್ರೀಗಳ ಪ್ರಥಮ ಆರಾಧನೆಯ ಪ್ರಯುಕ್ತ ಉಡುಪಿ ಶ್ರೀಕೃಷ್ಣ ಮಠದ ಪರ್ಯಾಯ ಅದಮಾರು ಮಠದ ಆಶ್ರಯದಲ್ಲಿ ಪೇಜಾವರ ಶ್ರೀವಿಶ್ವೇಶತೀರ್ಥ ಸ್ವಾಮೀಜಿಯ ಸಂಸ್ಮರಣಾ ಕಾರ್ಯಕ್ರಮವನ್ನು ಮಠದ ರಾಜಾಂಗಣದಲ್ಲಿ ನರಹರಿತೀರ್ಥ ವೇದಿಕೆಯಲ್ಲಿ ಆಯೋಜಿಸಲಾಗಿತ್ತು.


ಈ ಸಂದರ್ಭ ಅಧ್ಯಕ್ಷತೆಯನ್ನು ವಹಿಸಿದ್ದ ಪರ್ಯಾಯ ಅದಮಾರು ಮಠಾಧೀಶ ಶ್ರೀಈಶ ಪ್ರಿಯತೀರ್ಥ ಸ್ವಾಮೀಜಿ ವಿಶ್ವೇಶತೀರ್ಥರು ಸರಳ ವ್ಯಕ್ತಿತ್ವದೊಂದಿಗೆ ಸಾಮಾನ್ಯ ಜನರಿಗೂ ಬೇಕಾದವರಾಗಿದ್ದರು. ನಿಸ್ವಾರ್ಥದಿಂದ ಸಮಾಜಕ್ಕೋಸ್ಕರ ಮಧ್ವಾಚಾರ್ಯರ ತತ್ವದೊಂದಿಗೆ ತನ್ನ ಜೀವನವನ್ನು ಮುಡಿಪಾಗಿಟ್ಟಿದ್ದರು. ನಿತ್ಯಸಂಚಾರಿಗಳಾಗಿ ದೇಶದೆಲ್ಲೆಡೆ ತನ್ನ ಛಾಪನ್ನು ಮೂಡಿಸಿ, ಆರ್ತರಿಗೆ ಸ್ಪಂದಿಸಿದ ಏಕೈಕ ಸನ್ಯಾಸಿಯಾಗಿದ್ದರು ಎಂದು ಹೇಳಿದರು.

Facebook Comments

comments