Connect with us

LATEST NEWS

ಉಡುಪಿ ವಿಕೇಂಡ್ ಕರ್ಪ್ಯೂ – ಜನಸಂಚಾರ ವಿರಳ

ಉಡುಪಿ ಸೆಪ್ಟೆಂಬರ್ 04: ಉಡುಪಿ ಜಿಲ್ಲೆಯಲ್ಲಿ ವಿಕೇಂಡ್ ಕರ್ಪ್ಯೂ ಹಿನ್ನಲೆ ಆಹಾರ, ದಿನಸಿ ಸೇರಿದಂತೆ ತರಕಾರಿ, ಮೀನು ಹಾಗೂ ಮಾಂಸದ ಅಂಗಡಿ ಹೊರತುಪಡಿಸಿ ಉಳಿದ ಅಂಗಡಿಗಳು ಬಂದ್‌ ಆಗಿದೆ.


ವಿಕೇಂಡ್ ಕರ್ಪ್ಯೂ ಇದ್ದರೂ ಬಸ್ ಸಂಚಾರಕ್ಕೆ ಅವಕಾಶ ನೀಡಿರುವ ಹಿನ್ನಲೆ ಜಿಲ್ಲೆಯಲ್ಲಿ ಬಸ್‌ ಸಂಚಾರ ಯಥಾಸ್ಥಿತಿ ಮುಂದುವರಿದಿದ್ದು, ಉಡುಪಿ, ಮಂಗಳೂರು, ಕುಂದಾಪುರ ಸೇರಿದಂತೆ ಸರ್ವಿಸ್‌‌‌, ಎಕ್ಸ್‌ಪ್ರೆಸ್‌ ಸಂಚಾರ ಎಂದಿನಂತೆ ಮುಂದುವರಿದಿದೆ. ಆದರೆ, ಬಸ್‌‌ಗಳಲ್ಲಿ ಪ್ರಯಾಣಿಕರ ಸಂಖ್ಯೆ ಕಡಿಮೆ ಕಂಡುಬಂದಿದೆ.


ಅಗತ್ಯ ವಸ್ತುಗಳ ಅಂಗಡಿಗಳಿಗೆ ಮಧ್ಯಾಹ್ನ 2 ಗಂಟೆಯವರೆಗೆ ಅವಕಾಶ ನೀಡಲಾಗಿದೆ. ಹೆಚ್ಚಿನ ಚಟುವಟಿಕೆಗಳಿಗೆ ಅವಕಾಶ ಇರುವ ಹಿನ್ನೆಲೆ ಎಂದಿನಂತೆ ಜನಸಂಚಾರ ಕಂಡುಬಂದಿದೆ.