UDUPI
ಉಡುಪಿ: ಅಡಿಕೆ ಕಳ್ಳರ ಬಂಧಿಸಿ 1 ಲಕ್ಷದ ಅಡಿಕೆ ವಶಕ್ಕೆ ಪಡೆದ ಶಂಕರನಾರಾಯಣ ಪೊಲೀಸ್…!

ಉಡುಪಿ : ಉಡುಪಿ ಜಿಲ್ಲೆಯ ಶಂಕರನಾರಯಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೂವರು ಮಂದಿ ಅಡಿಕೆ ಕಳ್ಳರನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತರಿಂದ ಸುಮಾರು ಒಂದು ಲಕ್ಷ ಮೌಲ್ಯದ ಅಡಿಕೆಯನ್ನು ವಶಪಡಿಸಿಕೊಂಡಿದ್ದಾರೆ. ಇಮ್ರಾನ್, ಖಾಜಾ ಅಖೀಬ್, ಮುಝಾಫರ್ ಬಂಧಿತ ಆರೋಪಿಗಳಾಗಿದ್ದಾರೆ.ಕಳೆದ ಡಿಸೆಂಬರ್ ತಿಂಗಳಿನಲ್ಲಿ ಶಂಕರನಾರಾಯಣ ಪೊಲೀಸ್ ಠಾಣಾ ಸರಹದ್ದಿನ ಅಂಪಾರು ಗ್ರಾಮದ ನೈಲಕೊಂಡ ಎಂಬಲ್ಲಿರುವ ಕೆ. ಉಮೇಶ ರವರ ಮನೆಯ ಅಂಗಳದಲ್ಲಿ ಒಣಗಿಸಿದ್ದ ಸುಮಾರು 1,00,000/- ರೂ, ಮೌಲ್ಯದ ಸುಮಾರು 16 ಚೀಲದಷ್ಷು ಸಿಪ್ಪೆ ಅಡಿಕೆ(480 ಕೆ.ಜಿ)ಯನ್ನು ಯಾರೋ ಕಳ್ಳರು ಬೆಳಗ್ಗಿನ ಜಾವ ಕಳವು ಮಾಡಿಕೊಂಡು ಹೋದ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ದುರು ದಾಖಲಿಸಿಸಲಾಗಿತ್ತು.ಶಂಕರನಾರಾಯಣ ಠಾಣಾ ಪಿ.ಎಸ್. ಐ ಶ್ರೀ ನಾಸೀರ್ ಹುಸೇನ್ ಹಾಗೂ ಸಿಬ್ಬಂದಿಯಗಳು, ಕುಂದಾಪುರ ಗ್ರಾಮಾಂತರ ಠಾಣಾ ಅಧಿಕಾರಿ ಸಿಬ್ಬಂದಿಗಳು ಹಾಗೂ ಅಮಾಸೆಬೈಲು ಠಾಣಾ ಅಧಿಕಾರಿ ಮತ್ತು ಸಿಬಂದಿ ಕಾರ್ಯಾಚರಣೆ ನಡೆಸಿ ಮೂವರು ಆರೋಪಿಗಳನ್ನು ಬಂಧಸಿದ್ದಾರೆ. ಮತ್ತು ಆರೋಪಿಗಳು ಕಳವು ಮಾಡಿ ಮಾರಾಟ ಮಾಡಿದ್ದ ಸುಮರು 1.08 ಕ್ವಿಂಟಲ್ ಅಡಿಕೆ ಹಾಗೂ ಕೃತ್ಯಕ್ಕೆ ಬಳಸಿದ್ದ ಕಾರು ಹಾಗೂ ಒಂದು ಸ್ಕೂಟರ್ ಒಟ್ಟು ಅಂದಾಜು ಮೌಲ್ಯ 5,28,000/- ರೂ ಸದ್ರಿ ಸೊತ್ತುಗಳನ್ನು ಸ್ವಾಧೀನಪಡಿಸಿಕೊಂಡಿದ್ದಾರೆ. ಆರೊಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದಾಗ ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿರುತ್ತದೆ.
