LATEST NEWS
ಕಡಲಬ್ಬರಕ್ಕೆ ಉಡುಪಿ – ಕಾಪು ಮೀನುಗಾರಿಕಾ ರಸ್ತೆ ಮೇಲೆ ಸಮುದ್ರದ ನೀರು

ಉಡುಪಿ ಅಗಸ್ಟ್ 6: ಉಡುಪಿ ಜಿಲ್ಲೆಯಲ್ಲಿ ಮಳೆ ಅಬ್ಬರಕ್ಕೆ ಕಡಲು ಪ್ರಕ್ಷುಬ್ದಗೊಂಡಿದ್ದು, ಉಡುಪಿಯ ಪಡುಕೆರೆಯಲ್ಲಿ ಕಡಲ್ಕೊರೆತಕ್ಕೆ ಉಡುಪಿ – ಕಾಪು ಮೀನುಗಾರಿಕಾ ರಸ್ತೆಗೆ ಹಾನಿಯಾಗಿದೆ. ಉಡುಪಿ ಜಿಲ್ಲೆಯಲ್ಲಿ ಮಳೆ ಮುಂದುವರೆದಿದ್ದು, ಮಳೆ ಜೊತೆ ಕಡಲ ತಡಿಯಲ್ಲಿ ಕಡಲ್ಕೊರೆತ ಹೆಚ್ಚಾಗಿದೆ.
ಉಡುಪಿಯ ಪಡುಕರೆಯಲ್ಲಿ ಕಡಲ್ಕೊರೆತ ಪ್ರಾರಂಭವಾಗಿದ್ದು, ಉಡುಪಿ – ಕಾಪು ಮೀನುಗಾರಿಕಾ ರಸ್ತೆ ದಾಟಿ ಸಮುದ್ರದ ನೀರು ಮನ್ನುಗ್ಗಿದ್ದು, ಮೀನುಗಾರಿಕಾ ರಸ್ತೆಗೆ ಹಾನಿಯಾಗಿದೆ. ಈಗಾಗಲೇ ಕಡಲಬ್ಬರದ ಮುನ್ಸೂಚನೆಯನ್ನು ಹವಮಾನ ಇಲಾಖೆ ನೀಡಿದ್ದದು, ಅದರಂತೆ ಅರಬ್ಬೀ ಸಮುದ್ರದಲ್ಲಿ ಭಾರಿ ಗಾತ್ರದ ಅಲೆಗಳು ಏಳುತ್ತಿವೆ. ಮೂರೂವರೆಯಿಂದ ಐದೂವರೆಗೆ ಮೀಟರ್ ಎತ್ತರದ ಅಲೆಗಳು ದಡಕ್ಕೆ ಬಂದು ಅಪ್ಪಳಿಸುತ್ತಿದೆ. ಸದ್ಯ ಮೀನುಗಾರಿಕಾ ರಸ್ತೆಯ ಮೇಲಿದ್ದ ಮರಳು ತೆಗೆದು ಸುಗಮ ಸಂಚಾರಕ್ಕೆ ಸ್ಥಳೀಯರು ವ್ಯವಸ್ಥೆ ಮಾಡಿದ್ದಾರೆ.

ಇನ್ನು ಕುಂದಾಪುರ ತಾಲೂಕಿನಲ್ಲಿ ಸುರಿದ ಭಾರಿ ಮಳೆಗೆ ಕನ್ಯಾನ ಗ್ರಾಮದ ಸರೋಜ ಅವರ ವಾಸ್ತವ್ಯದ ಮನೆಗೆವಹಾನಿಯಾಗಿದ್ದು 10 ಸಾವಿರ ರೂಪಾಯಿ ನಷ್ಟ ಅಂದಾಜಿಸಲಾಗಿದೆ. ಆಲೂರು ಗ್ರಾಮದ ವಿಜಯ್ ಶೆಟ್ಟಿ ಮತ್ತು ಸುಗಂಧಿ ಶೆಡ್ತಿಯವರ ಮನೆಗೆ ಹಾನಿಯಾಗಿದ್ದು 18000 ರೂಪಾಯಿ ನಷ್ಟ ಅಂದಾಜಿಸಲಾಗಿದೆ. ಬೀಜಾಡಿ ಗ್ರಾಮದ ಶಾಂತರವರ ಮನೆ ಭಾಗಶಃ ಹಾನಿಯಾಗಿದ್ದು 50,000 ರೂಪಾಯಿ ನಷ್ಟ ಅಂದಾಜಿಸಲಾಗಿದೆ.