Connect with us

UDUPI

NH 66 ಕಾರು ಡಿಕ್ಕಿ ಪಾದಚಾರಿ ಸಾವು

NH 66 ಕಾರು ಡಿಕ್ಕಿ ಪಾದಚಾರಿ ಸಾವು

ಉಡುಪಿ, ಸೆಪ್ಟೆಂಬರ್ 18 : ಉಡುಪಿಯಲ್ಲಿ ರಸ್ತೆ ದಾಟುತ್ತಿದ್ದಾಗ ಕಾರು ಢಿಕ್ಕಿ ಹೊಡೆದು ಪಾದಚಾರಿಯೊಬ್ಬರು ದಾರುಣವಾಗಿ ಮೃತಪಟ್ಟಿದ್ದಾರೆ.

ರಾಷ್ಟ್ರೀಯ ಹೆದ್ದಾರಿ 66ರಲ್ಲಿ  ಕೋಟಾ ಎಂಬಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಮೃತ ದುರ್ದೈವಿಯನ್ನು ಖಾಸಾಗಿ ಬಸ್ ಚಾಲಕ ಗುಲ್ಮಾಡಿ ನಿವಾಸಿ ಇಸ್ಮಾಯಿಲ್ (55)  ಎಂದು ಗುರುತ್ತಿಸಲಾಗಿದೆ.

ಇಸ್ಮಾಯಿಲ್ ಅವರು ರಸ್ತೆ ದಾಟುತ್ತಿದ್ದಾಗ ಉಡುಪಿ ಕಡೆಯಿಂದ  ವೇಗವಾಗಿ ಬಂದ ಕಾರು ಢಿಕ್ಕಿ ಹೊಡೆದಿದ್ದು, ಕಾರು ಹೊಡೆದ ರಭಸಕ್ಕೆ ಇಸ್ಮಾಯಿಲ್ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.