Connect with us

    LATEST NEWS

    ಎಪ್ರಿಲ್ 27ಕ್ಕೆ ಉಡುಪಿಗೆ ರಾಹುಲ್ ಗಾಂಧಿ ಭೇಟಿ….!!

    ಉಡುಪಿ ಎಪ್ರಿಲ್ 22: ರಾಜ್ಯ ವಿಧಾನಸಭಾ ಚುನಾವಣೆ ಹಿನ್ನಲೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಎಪ್ರಿಲ್ 27ರಂದು ಉಡುಪಿ ಜಿಲ್ಲೆಗೆ ಭೇಟಿ ನೀಡಲಿದ್ದಾರೆ.


    ಈ ಬಗ್ಗೆ ಮಾಹಿತಿ ನೀಡಿದ ಉಡುಪಿ ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ರಾಹುಲ್ ಗಾಂಧಿ ಎಪ್ರಿಲ್ 27 ರಂದು ಉಡುಪಿಗೆ ಆಗಮಿಸಲಿದ್ದು, ಅಂದು ಅವರು ಕಾಪು ತಾಲ್ಲೂಕಿನ ಉಚ್ಚಿಲದಲ್ಲಿ ಮೀನುಗಾರರೊಂದಿಗೆ ಸಂವಾದ ನಡೆಸಲಿದ್ದಾರೆ. ಮೀನುಗಾರರ ಸಮಸ್ಯೆ, ಮೀನುಗಾರಿಕಾ ಕ್ಷೇತ್ರದ ಸವಾಲುಗಳು ಸೇರಿದಂತೆ ಹಲವು ವಿಚಾರಗಳ ಕುರಿತು ರಾಹುಲ್ ಸಂವಾದದಲ್ಲಿ ಮಾತನಾಡಲಿದ್ದಾರೆ. ಚುನಾವಣೆ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಭೇಟಿ ಪಕ್ಷಕ್ಕೆ ಶಕ್ತಿ ತುಂಬಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    Share Information
    Advertisement
    Click to comment

    You must be logged in to post a comment Login

    Leave a Reply