Connect with us

  LATEST NEWS

  ಉಡುಪಿ : ರಸ್ತೆ ಅಪಘಾತಕ್ಕೆ ಗುತ್ತಿಗೆದಾರನ ಮೇಲೆ ಕೇಸು ಜಡಿದ ಹಿರಿಯಡ್ಕ ‌ಪೊಲೀಸರು…!!

  ಉಡುಪಿ : ರಸ್ತೆ ಅಪಘಾತಕ್ಕೆ ಕಾರಣವಾದ ಗುತ್ತಿಗೆದಾರನ ಮೇಲೆ ಕೇಸು ಜಡಿದ ಘಟನೆ ಉಡುಪಿ ಜಿಲ್ಲೆಯಲ್ಲಿ ನಡೆದುದೆ. ಹಿರಿಯಡ್ಕ ಪೊಲೀಸರು ರಸ್ತೆ ಕಾಮಗಾರಿ ನಡೆಸುತ್ತಿದ್ದ ಗುತ್ತಿಗೆದಾರನ ಮೇಲೆ ಎಫ್‌ಐ ಆರ್ ಮಾಡಿದ್ದಾರೆ.


  ಜಲಜೀವನ್ ಮಿಶನ್ ಯೋಜನೆಯ ಕಾಮಗಾರಿ ಗುತ್ತಿಗೆ ಪಡೆದ ಗುತ್ತಿಗೆದಾರರು ರಸ್ತೆಬದಿಯಲ್ಲಿ ಪೈಪ್ ಅಳವಡಿಸಲು ತೆಗೆದ ಚರಂಡಿ ಮಣ್ಣನ್ನು ಕಾಂಕ್ರೀಟ್ ರಸ್ತೆಯ ಮೇಲೆ ಹಾಕಿದ್ದರಿಂದ ಹಾಗೂ ಯಾವುದೇ ಸೂಚನಾ ಫಲಕವನ್ನು ಅಳವಡಿಸದೇ ಇದ್ದ ಕಾರಣ ಸದ್ರಿ ರಸ್ತೆಯಲ್ಲಿ ಕುರ್ಪಾಡಿ ಕಡೆಗೆ ಹೋಗುತ್ತಿದ್ದ TVS XL ದ್ವಿಚಕ್ರ ವಾಹನ ಸವಾರ ಸುಧಾಕರ್ ಕುಲಾಲ್ ರವರು ನಿಯಂತ್ರಣ ತಪ್ಪಿ ಮಣ್ಣಿನ ರಾಶಿಗೆ ಢಿಕ್ಕಿ ಹೊಡೆದು ರಸ್ತೆಗೆ ಬಿದ್ದ ಪರಿಣಾಮ ಅವರ ಬಾಯಿಗೆ, ಹಣೆಗೆ ತೀವ್ರ ಸ್ವರೂಪದ ರಕ್ತಗಾಯಗಳಾಗಿತ್ತು. ಈ ಅಪಘಾತಕ್ಕೆ ಜಲಜೀವನ್ ಮಿಶನ್ ಯೋಜನೆಯ ಕಾಮಗಾರಿ ಗುತ್ತಿಗೆ ಪಡೆದ ಗುತ್ತಿಗೆದಾರರು ರಸ್ತೆಬದಿಯಲ್ಲಿ ಪೈಪ್ ಅಳವಡಿಸಲು ತೆಗೆದ ಚರಂಡಿ ಮಣ್ಣನ್ನು ಕಾಂಕ್ರೀಟ್ ರಸ್ತೆಯ ಮೇಲೆ ಹಾಕಿ, ಯಾವುದೇ ಸೂಚನಾ ಫಲಕವನ್ನು ಅಳವಡಿಸದೇ ಸಾರ್ವಜನಿಕರು ಸಂಚರಿಸುವ ರಸ್ತೆಗೆ ಅಡ್ಡಿಯನ್ನುಂಟು ಮಾಡಿ ನಿರ್ಲಕ್ಷ್ಯತನ ವಹಿಸಿರುವುದೇ ಕಾರಣವಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಗುತ್ತಿಗೆದಾರನ ಮೇಲೆ ಎಫ್‌ಐಆರ್ ದಾಖಲು ಮಾಡಿದ್ದಾರೆ.

  Share Information
  Advertisement
  Click to comment

  You must be logged in to post a comment Login

  Leave a Reply