Connect with us

    LATEST NEWS

    ಸುರತ್ಕಲ್ ಕೃಷ್ಣಾಪುರದ ವೈದ್ಯಕೀಯ ವಿದ್ಯಾರ್ಥಿ ಇಹಾಬ್ ಅಬೂಬಕ್ಕರ್ ಮೃತ ದೇಹ ಮಂಜೇಶ್ವರದಲ್ಲಿ ಪತ್ತೆ..!

    ಮಂಗಳೂರು: ಸುರತ್ಕಲ್ (surathkal)   ಕೃಷ್ಣಾಪುರದ ನಾಪತ್ತೆಯಾಗಿದ್ದ ಯುವಕನ ಮೃತದೇಹ ಕಾಸರಗೋಡು ಮಂಜೇಶ್ವರ ಕೊಪ್ಪಳ ನದಿಯಲ್ಲಿ ಪತ್ತೆಯಾಗಿದೆ. ಮೃತ ಯುವಕನನ್ನು ಸುರತ್ಕಲ್ ಕೃಷ್ಣಾಪುರದ ಇಹಾಬ್ ಅಬೂಬಕ್ಕರ್ ( 20) ಎಂದು ಗುರುತಿಸಲಾಗಿದೆ.

    ಮಂಗಳೂರು ಎ.ಜೆ. ವೈದ್ಯಕೀಯ ಕಾಲೇಜು ವಿದ್ಯಾರ್ಥಿ ಯಾಗಿದ್ದ ಈತ ಕೆಲ ದಿನಗಳ ಹಿಂದೆ ಮಂಜೇಶ್ವರ ಪರಿಸರ ದಲ್ಲಿರುವ ಸಂಬಂಧಿಕರ ಮನೆಯಿಂದ ನಾಪತ್ತೆಯಾಗಿದ್ದ. ಈ ಕುರಿತು ಪೊಲೀಸರಿಗೆ ದೂರು ನೀಡಲಾಗಿತ್ತು. ತನಿಖೆ ನಡೆಸುತ್ತಿದ್ದ ಪೊಲೀಸರು ಬುಧವಾರ ಸಂಜೆ ಕೊಪ್ಪಳ ನದಿಯಲ್ಲಿ ಯುವಕನ ಮೃತದೇಹ ಪತ್ತೆ ಹಚ್ಚಿದ್ದಾರೆ ಎಂದು ತಿಳಿದು ಬಂದಿದೆ. ಮೃತ ದೇಹದ ಗುರುತು ಪತ್ತೆಯಾಗದ ಹಿನ್ನೆಲೆಯಲ್ಲಿ ಮಂಜೇಶ್ವರ ಠಾಣಾ ಪೊಲೀಸರು ಕರ್ನಾಟಕ ಪೊಲೀಸರಿಗೆ ಮಾಹಿತಿ ನೀಡಿದ್ದರು. ಮಾಹಿತಿ ತಿಳಿದು ಕಾಸರಗೋಡು ಜನರಲ್ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದ್ದ ಮೃತ ದೇಹದ ಗುರುತನ್ನು ಕುಟುಂಬಸ್ಥರು ಪತ್ತೆ ಹಚ್ಚಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply