Connect with us

LATEST NEWS

ಉಡುಪಿ ಪೊಲೀಸರ ಆಪರೇಷನ್ ಸನ್ ಸೆಟ್…!!

ಉಡುಪಿ ಮಾರ್ಚ್ 19: ಉಡುಪಿ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಟ್ಟು ನಿಟ್ಟಿನಲ್ಲಿ ಇಡಲು ಹಾಗೂ ಸಮಾಜಘಾತುಕ ಶಕ್ತಿಗಳ ವಿರುದ್ದ ಹದ್ದಿನಕಣ್ಣು ಇಡಲು ಉಡುಪಿ ಪೊಲೀಸರಿು ಆಪರೇಷನ್ ಸನ್ ಸೆಟ್ ಎಂಬ ವಿಶೇಷ ಅಭಿಯಾನ ಪ್ರಾರಂಭಿಸಿದ್ದಾರೆ.
ಅದರಂತೆ ಉಡುಪಿ ಜಿಲ್ಲಾ ಪೊಲೀಸರು ಮಾರ್ಚ್ 17 ರ ಶನಿವಾರ ಸಂಜೆ 7ರಿಂದ 11ರವರೆಗೆ ಜಿಲ್ಲೆಯಾದ್ಯಂತ ‘ ಆಪರೇಷನ್ ಸನ್‌ಸೆಟ್ ’ ವಿಶೇಷ ಅಭಿಯಾನ ನಡೆಸಿದರು. ಇದರ ಅಂಗವಾಗಿ ಎಲ್ಲಾ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಒಳಗೊಂಡ ವಿಶೇಷ ತಂಡಗಳನ್ನು ರಚಿಸಿ ಜಿಲ್ಲೆಯ ಆಯಕಟ್ಟಿನ ಸ್ಥಳಗಳಲ್ಲಿ ಚೆಕ್ ಪೋಸ್ಟ್ ಗಳನ್ನು ಮಾಡಿ ವಾಹನಗಳನ್ನು ಕೂಲಂಕುಷವಾಗಿ ತಪಾಸಣೆ ನಡೆಸಲಾಯಿತು.


ಸಾರ್ವಜನಿಕರಿಗೆ ತೊಂದರೆ ಉಂಟುಮಾಡುವವರ ವಿರುದ್ಧ ಕರ್ನಾಟಕ ಪೊಲೀಸ್ ಕಾಯಿದೆಯಡಿಯಲ್ಲಿ ಇಲಾಖೆಯು ಪ್ರಕರಣಗಳನ್ನು ದಾಖಲಿಸಿದ್ದಾರೆ. ಮತ್ತು ಹಠಾತ್ ತಪಾಸಣೆಯಿಂದಾಗಿ ಗಾಂಜಾ ಹಾಗೂ ಸಣ್ಣ ಪ್ರಮಾಣ ಡ್ರಗ್ಸ್ MDMA ಹೊಂದಿದ್ದ ಮೂವರು ಬಂಧಿಸಿದ್ದಾರೆ. ಮತ್ತೊಂದು ಪ್ರಕರಣದಲ್ಲಿ 45 ಲೀಟರ್ ಮದ್ಯ ಸಾಗಿಸುತ್ತಿದ್ದ ಮತ್ತೊಂದು ವಾಹನವನ್ನು ವಶಪಡಿಸಿಕೊಂಡಿದ್ದಾರೆ. ಇನ್ನು ಫಿಂಗರ್‌ಪ್ರಿಂಟ್ ಸ್ಕ್ಯಾನರ್‌ಗಳ ಸಹಾಯದಿಂದ ಪೊಲೀಸರು ಈ ಹಿಂದೆ ಕಳ್ಳತನ ಮತ್ತು ಸಂಬಂಧಿತ ಅಪರಾಧಗಳಲ್ಲಿ ತೊಡಗಿರುವ 60 ಕ್ಕೂ ಹೆಚ್ಚು ಅಭ್ಯಾಸ ಅಪರಾಧಿಗಳು/ಆರೋಪಿಗಳನ್ನು ಪರಿಶೀಲಿನೆ ನಡೆಸಿದ್ದಾರೆ.

ಅಲ್ಲದೆ ಸರಿಯಾದ ದಾಖಲೆಗಳಿಲ್ಲದ, ನಕಲಿ ನಂಬರ್ ಪ್ಲೇಟ್ ಇಲ್ಲದ ವಾಹನಗಳು, ನಂಬರ್ ಪ್ಲೇಟ್ ಇಲ್ಲದ ವಾಹನಗಳು ಹಾಗೂ ಚಾಲಕರು ಮದ್ಯಪಾನ ಮಾಡಿ ಚಾಲನೆ ಮಾಡುತ್ತಿರುವುದನ್ನು ಪರಿಶೀಲಿಸಲಾಯಿತು. ಮದ್ಯಪಾನ ಮಾಡಿ ವಾಹನ ಚಾಲನೆ ಮಾಡಿದ್ದಕ್ಕಾಗಿ 32 ಪ್ರಕರಣಗಳು ದಾಖಲಾಗಿವೆ. ಸರಿಯಾದ ನಂಬರ್ ಪ್ಲೇಟ್ ಇಲ್ಲದ ಅಥವಾ ನಕಲಿ ನಂಬರ್ ಪ್ಲೇಟ್ ಹೊಂದಿದ್ದ 29 ವಾಹನಗಳನ್ನು ಇಲಾಖೆ ವಶಪಡಿಸಿಕೊಂಡಿದೆ. ಸಂಚಾರ ನಿಯಮ ಉಲ್ಲಂಘನೆಗೆ ಸಂಬಂಧಿಸಿದಂತೆ ಒಟ್ಟು 258 ಪ್ರಕರಣಗಳನ್ನು ದಾಖಲಿಸಲಾಗಿದ್ದು, ಸುಮಾರು 1.30 ಲಕ್ಷ ರೂ ದಂಡವನ್ನು ವಸೂಲು ಮಾಡಿದ್ದಾರೆ.

ಜಿಲ್ಲೆಯ 65 ರೌಡಿಗಳ ಚಲನವಲನದ ಬಗ್ಗೆ ಮಾಹಿತಿಗಾಗಿ ದಿಢೀರ್ ತಪಾಸಣೆಯನ್ನೂ ನಡೆಸಲಾಯಿತು. ನಾಗರಿಕರಲ್ಲಿ ವಿಶ್ವಾಸ ಮೂಡಿಸಲು ಮತ್ತು ಈ ಸಮಾಜ ವಿರೋಧಿ ಶಕ್ತಿಗಳಿಗೆ ಕಡಿವಾಣ ಹಾಕಲು ಮತ್ತು ಕಾನೂನುಗಳ ಜಾರಿಗಾಗಿ ಈ ವಿಶೇಷ ಅಭಿಯಾನವನ್ನು ಕೈಗೊಳ್ಳಲಾಗಿದೆ ಎಂದು ಎಸ್ಪಿ ಹೇಳಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *